ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಕೋಟಿ ಉದ್ಯೋಗ ಸೃಷ್ಟಿ ಸ್ವದೇಶಿ ಆರ್ಥಿಕ ನೀತಿ

Last Updated 4 ಫೆಬ್ರುವರಿ 2023, 0:36 IST
ಅಕ್ಷರ ಗಾತ್ರ

ಕೋಟಿ ಉದ್ಯೋಗ ಸೃಷ್ಟಿ ಸ್ವದೇಶಿ ಆರ್ಥಿಕ ನೀತಿ

ನವದೆಹಲಿ, ಫೆ. 3 (ಪಿಟಿಐ): ಅಯೋಧ್ಯೆ ಯಲ್ಲಿನ ವಿವಾದಿತ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದಲ್ಲಿ ನೀಡಿರುವ ವಿಶೇಷ ಸ್ಥಾನಮಾನ ರದ್ದು; ಹಸಿವು–ಅನಕ್ಷರತೆ ನಿರ್ಮೂಲನೆ; ವರ್ಷಕ್ಕೆ ಕೋಟಿ ಉದ್ಯೋಗ ಸೃಷ್ಟಿ; ಸ್ವದೇಶಿ ಆರ್ಥಿಕ ನೀತಿಗೆ ಆದ್ಯತೆ; ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಹಾಗೂ ಕೋಮುಗಲಭೆ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆ.

ಇವು ಮುಂಬರುವ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಪ್ರಮುಖ ಭರವಸೆಗಳು.

ಆದರೆ ಸಂಘ ಪರಿವಾರದ ಸದಸ್ಯರು ಪ್ರಸ್ತಾಪಿಸಿದ, ಇಡೀ ರಾಷ್ಟ್ರಕ್ಕೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಬೇಕು ಎಂಬ ಬೇಡಿಕೆ ಬಗ್ಗೆ ಪ್ರಣಾಳಿಕೆಯಲ್ಲಿ ಯಾವುದೇ ಪ್ರಸ್ತಾಪ ಇಲ್ಲ.

ಬಿಜೆಪಿಗೆ ತಾರಾದೇವಿ, ಮುಖೇಶ್‌ ಖನ್ನ

ನವದೆಹಲಿ, ಫೆ. 3 (ಪಿಟಿಐ): ಕಾಂಗ್ರೆಸ್‌ನ ಮಾಜಿ ಸಚಿವರುಗಳಾದ ತಾರಾದೇವಿ ಸಿದ್ಧಾರ್ಥ, ಅಬ್ರಾರ್‌ ಅಹಮದ್‌ ಮತ್ತು ದೂರದರ್ಶನ ಮಹಾಭಾರತದ ‘ಭೀಷ್ಮ ಪಿತಾಮಹ’ ಮುಖೇಶ್‌ ಖನ್ನ ಅವರು ಇಂದು ಬಿಜೆಪಿ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT