ಸಮನ್ವಯ ಸಮಿತಿ ರಚನೆ: ಅಟಲ್‌ಗೆ ಅಧಿಕಾರ
ನವದೆಹಲಿ, ಮಾರ್ಚ್ 16 (ಪಿಟಿಐ)– ಸಮ್ಮಿಶ್ರ ಸರ್ಕಾರದ ಆಡಳಿತ ಸುಲಲಿತವಾಗಿ ನಡೆಯಲು ಸಾಧ್ಯವಾಗುವಂತೆ ಸಲಹೆ ನೀಡುವ ಸಲುವಾಗಿ ಸಮನ್ವಯ ಸಮಿತಿ ರಚಿಸುವ ಅಧಿಕಾರವನ್ನು ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ನಿಯೋಜಿತ ಪ್ರಧಾನಿ ಎ.ಬಿ.ವಾಜಪೇಯಿ ಅವರಿಗೆ ನೀಡಿವೆ.
ರಾಷ್ಟ್ರೀಯ ಕಾರ್ಯಕ್ರಮ ಚರ್ಚಿಸುವ ಸಲುವಾಗಿ ಸೇರಿದ್ದ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ಸಭೆ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಬಿಜೆಪಿ ನಾಯಕ ಜಸ್ವಂತ್ ಸಿಂಗ್, ‘ಸಮಿತಿಯ ಸದಸ್ಯರು ಹಾಗೂ ಅದರ ಅಧ್ಯಕ್ಷರನ್ನೂ ವಾಜಪೇಯಿ ಅವರೇ ನಿರ್ಧರಿಸುವರು’ ಎಂದರು.
ಸಿಪಿಪಿ ಅಧ್ಯಕ್ಷರಾಗಿ ಸೋನಿಯಾ ಆಯ್ಕೆ
ನವದೆಹಲಿ, ಮಾರ್ಚ್ 16– ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶನಿವಾರ ಅಧಿಕಾರ ಸ್ವೀಕಾರ ಮಾಡಿದ ಸೋನಿಯಾ ಗಾಂಧಿ ಅವರು, ಇಂದು ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.
ತಮಗಾಗಿಯೇ ಪುನರ್‌ಸೃಷ್ಟಿಸಲಾದ ಈ ಸ್ಥಾನವನ್ನು ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಸೋನಿಯಾ ಅವರು, ಶರದ್ ಪವಾರ್ ಅವರನ್ನು ಲೋಕಸಭೆಯಲ್ಲಿನ ಮತ್ತು ಡಾ. ಮನ್‌ಮೋಹನ್ ಸಿಂಗ್ ಅವರನ್ನು ರಾಜ್ಯಸಭೆಯಲ್ಲಿನ ಕಾಂಗ್ರೆಸ್ ಗುಂಪಿನ ನಾಯಕರನ್ನಾಗಿ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.