ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಭಾನುವಾರ 31 ಮೇ 1998

Published 30 ಮೇ 2023, 22:28 IST
Last Updated 30 ಮೇ 2023, 22:28 IST
ಅಕ್ಷರ ಗಾತ್ರ

ಖಾಸಗಿ ಶಾಲೆಗಳ ಶಿಕ್ಷಣ ಶುಲ್ಕ ಪಾವತಿಗೆ ಸರ್ಕಾರಕ್ಕೆ ಆದೇಶ

ಬೆಂಗಳೂರು, ಮೇ 30– ಮಕ್ಕಳಿಗೆ 14ನೇ ವಯಸ್ಸಿನವರೆಗೆ ಉಚಿತ ಶಿಕ್ಷಣ ಕೊಡಬೇಕೆಂಬ ಸಂವಿಧಾನದ ನಿರ್ದೇಶನದ ಪಾಲನೆ ದೃಷ್ಟಿಯಿಂದ, ಖಾಸಗಿ ಶಾಲೆಗಳಲ್ಲಿ ಅಧ್ಯಯನ ನಡೆಸುತ್ತಿರುವ ಮಕ್ಕಳ ಶುಲ್ಕವನ್ನು ಸರ್ಕಾರವು ಪೋಷಕರಿಗೆ ಅಥವಾ ಶಿಕ್ಷಣ ಸಂಸ್ಥೆಗೆ ತುಂಬಿ ಕೊಡಬೇಕೆಂದು ಹೈಕೋರ್ಟ್ ಇಂದು ಸರ್ಕಾರಕ್ಕೆ ಆದೇಶಿಸಿತು.

ಇದಕ್ಕಾಗಿ ಸರ್ಕಾರವು ಶಿಕ್ಷಣ ಕಾಯ್ದೆಯ 145 (2) ವಿಧಿ ಅನ್ವಯ ಖಾಸಗಿ ಶಿಕ್ಷಣ ಸಂಸ್ಥೆಗಳು ವಸೂಲಿ ಮಾಡಬಹುದಾದ ಶುಲ್ಕ, ವಂತಿಗೆ ಮತ್ತಿತರ ವಸೂಲಿಗಳ ಬಗ್ಗೆ ನಿಯಮಗಳನ್ನು ಮೂರು ತಿಂಗಳಲ್ಲಿ ರಚಿಸಬೇಕೆಂದು ಸೂಚಿಸಿತು.

ಅನುದಾನ ಪಡೆಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಬೋಧಕರು ಮತ್ತು ಬೋಧಕೇತರರಿಗೆ ವೇತನ ಅನುದಾನ ಕೊಡಬೇಕೆಂದು ಏಕ ನ್ಯಾಯಮೂರ್ತಿಯವರು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಮತ್ತು ಶಿಕ್ಷಣ ಇಲಾಖೆ 19 ಮೇಲ್ಮನವಿಗಳನ್ನು ಹಾಗೂ ಅನುದಾನಕ್ಕೆ ಆದೇಶ ಕೋರಿ ಖಾಸಗಿ ಸಂಸ್ಥೆಗಳವರು ಸಲ್ಲಿಸಿದ್ದ 58 ರಿಟ್‌ ಅರ್ಜಿಗಳನ್ನು ವಿಲೇವಾರಿ ಮಾಡಿದ ಮುಖ್ಯ ನ್ಯಾಯಮೂರ್ತಿ ಆರ್‌.ಪಿ.ಸೇಥಿ ಮತ್ತು ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಇಂದು ತೀರ್ಪು ನೀಡಿ, ರಿಟ್‌ ಅರ್ಜಿಗಳನ್ನು ವಜಾ ಮಾಡಿತು.

ಏಕ ನ್ಯಾಯಮೂರ್ತಿಯವರ ತೀರ್ಪನ್ನು ಮಾರ್ಪಡಿಸಿ, ‘ಖಾಸಗಿಯವರು ಅನುದಾನವನ್ನೂ ಪಡೆಯುವುದು ಹಾಗೂ ವಂತಿಗೆ, ಶುಲ್ಕವನ್ನೂ ವಸೂಲಿ ಮಾಡುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT