ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶನಿವಾರ, 17 ಫೆಬ್ರವರಿ 1996

Last Updated 16 ಫೆಬ್ರುವರಿ 2021, 17:41 IST
ಅಕ್ಷರ ಗಾತ್ರ

ಚಿತ್ರೋದ್ಯಮ: ಮುಂದುವರಿದ ಬಿಕ್ಕಟ್ಟು, ತೀವ್ರ ವಿರೋಧ
ಬೆಂಗಳೂರು, ಫೆ. 16:
ಪರಭಾಷಾ ಚಿತ್ರಗಳನ್ನು ಆಯಾ ರಾಜ್ಯಗಳಲ್ಲಿ ಬಿಡುಗಡೆ ಯಾದ ಏಳು ವಾರಗಳ ನಂತರವಷ್ಟೇ ಕರ್ನಾಟಕದಲ್ಲಿ ಬಿಡುಗಡೆ ಮಾಡಬೇಕು ಎಂಬ ಸರ್ಕಾರದ ತೀರ್ಮಾನಕ್ಕೆ ಚಿತ್ರ ಪ್ರದರ್ಶಕರು ಮತ್ತು ವಿತರಕರಿಂದತೀವ್ರ ವಿರೋಧ ವ್ಯಕ್ತವಾಗಿದೆ.

‘ರಾಜ್ಯಕ್ಕೆ ಒಂದೇ ಸಾಹಿತ್ಯ ಅಕಾಡೆಮಿ’
ಬೆಂಗಳೂರು, ಫೆ. 16:
ಪ್ರತೀ ಭಾಷೆಗೂ ಒಂದೊಂದು ಪ್ರತ್ಯೇಕ ಅಕಾಡೆಮಿಯ ಬದಲು, ಎಲ್ಲ ಭಾಷೆಗಳಿಗೂ ಒಂದೇ ‘ಕರ್ನಾಟಕ ಅಕಾಡೆಮಿ’ಯ ಸ್ಥಾಪನೆ ಸೂಕ್ತ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್.ಅನಂತಮೂರ್ತಿ ಇಂದು ಇಲ್ಲಿ ಅಭಿಪ್ರಾಯಪಟ್ಟರು.

‘ಪ್ರತೀ ಭಾಷೆಗೆ ಬೇರೆ ಬೇರೆ ಅಕಾಡೆಮಿ ಇರುವುದೆಂದರೆ, ಎಲ್ಲ ಭಾಷೆಗಳೂ ನಮ್ಮವು ಎಂದು ಒಪ್ಪಿಕೊಂಡಂತೆ ಆಗುವುದಿಲ್ಲ’ ಎಂದ ಅವರು, ‘ಎಲ್ಲ ಭಾಷೆಗಳ ಸಾಹಿತ್ಯದ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುವ ಕೇಂದ್ರ ಸಾಹಿತ್ಯ ಅಕಾ ಡೆಮಿಯ ಮಾದರಿಯಲ್ಲಿ ಕರ್ನಾಟಕ ಅಕಾ ಡೆಮಿ ಕೆಲಸ ಮಾಡಬಹುದು’ ಎಂದರು.

ನಗರದಲ್ಲಿ ಫೆ. 22ರಿಂದ 28ರವರೆಗೆ ನಡೆಯುವ ‘ಸಾಹಿತ್ಯೋತ್ಸವ’ದ ಹಿನ್ನೆಲೆ ಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೀಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT