ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶನಿವಾರ, 2–3–1996

Last Updated 1 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಹವಾಲ ತನಿಖೆ: ಸಿಬಿಐಗೆ ಪರಮಾಧಿಕಾರ

ನವದೆಹಲಿ, ಮಾರ್ಚ್‌ 1 (ಯುಎನ್‌ಐ, ಪಿಟಿಐ)– ಅನಿರೀಕ್ಷಿತ ಬೆಳವಣಿಗೆಯ ನಡುವೆ ಹವಾಲ ಹಗರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಇಂದು ಪರಮಾಧಿಕಾರ ನೀಡಿದೆ. ತನಿಖೆ ಹಂತದಲ್ಲಿ ನ್ಯಾಯಾಲಯಕ್ಕಲ್ಲದೆ ಇನ್ಯಾರಿಗೂ ವರದಿ ನೀಡಬಾರದು ಮತ್ತು ಸಲಹೆ ಪಡೆಯಬಾರದು ಎಂದು ಸಿಬಿಐಗೆ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಸುಪ್ರೀಂ ಕೋರ್ಟಿನ ಈ ಆದೇಶ ದಿಂದಾಗಿ ಸಿಬಿಐ, 65 ಕೋಟಿ ರೂಪಾಯಿ ಜೈನ್ ಹವಾಲ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಪಿ.ವಿ.ನರಸಿಂಹ ರಾವ್ ಮತ್ತು ಎಲ್ಲ ಆಡಳಿತಾತ್ಮಕ ನಿಯಂತ್ರಣದಿಂದ ಸಂಪೂರ್ಣವಾಗಿ ಹೊರ ಬಂದಂತಾಗಿದೆ. ‘ನಿಮ್ಮ ಆಡಳಿತ ನಿಯಂತ್ರಣ ಹೊಂದಿರು ವವರಿಂದಲೂ ನೀವು ಸಲಹೆ ಪಡೆಯ ಬಾರದು ಮತ್ತು ಅವರಿಗೆ ವರದಿ ನೀಡ ಬಾರದು’ ಎಂದು ನ್ಯಾಯಮೂರ್ತಿಗಳಾದ ಜೆ.ಎಸ್.ವರ್ಮಾ, ಎಸ್‌.ಪಿ.ಬರೂಚಾ ಮತ್ತು ಎಸ್‌.ಸಿ.ಸೇನ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ಏಳನೇ ತರಗತಿ ಪಬ್ಲಿಕ್ ಪರೀಕ್ಷೆಈ ವರ್ಷ ಇಲ್ಲ

ಬೆಂಗಳೂರು, ಮಾರ್ಚ್‌ 1– ರಾಜ್ಯದಲ್ಲಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸು ವುದನ್ನು ಮುಂದಿನ ಶಿಕ್ಷಣ ವರ್ಷದಿಂದ ಜಾರಿಗೆ ತರಬೇಕೆಂದು ಸೂಚಿಸಿದ ಹೈಕೋರ್ಟ್, ಈ ವರ್ಷದಿಂದಲೇ ಜಾರಿಗೆ ಕೊಡುವುದನ್ನು ರದ್ದುಗೊಳಿಸಿತು.

ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿಯಿತಾದರೂ ಅನೇಕ ಸಂದರ್ಭಗಳಲ್ಲಿ ಉತ್ತಮ ತೀರ್ಮಾನಗಳನ್ನು ಜಾರಿಗೆ ತಂದ ಸಮಯದ ದೃಷ್ಟಿಯ ಆಧಾರದ ಮೇಲೆ ನ್ಯಾಯಾಲಯ ರದ್ದುಗೊಳಿಸಬೇಕಾ ಗುತ್ತದೆ. ಪಬ್ಲಿಕ್ ಪರೀಕ್ಷೆಯು ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಟಿಯಿಂದ ಒಳ್ಳೆಯದಾದರೂ ಜಾರಿಗೆ ತಂದ ಸಮಯ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT