ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, ಮಾರ್ಚ್‌ 5, 1996

Last Updated 4 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಹೊಸ ತೆರಿಗೆ ಇಲ್ಲದ ರಾಜ್ಯ ಬಜೆಟ್‌: 132 ಕೋಟಿ ಖೋತಾ

ಬೆಂಗಳೂರು, ಮಾರ್ಚ್‌ 4– ವಿದ್ಯಾವಂತ ಗ್ರಾಮೀಣ ಬಡ ಯುವಕರಿಗೆ ಸಬ್ಸಿಡಿ
ಸಹಿತ ಸಾಲದ ನೆರವು, ಗಂಡು– ಹೆಣ್ಣು ತಾರತಮ್ಯ ನಿವಾರಣೆಗೆ ‘ನಮ್ಮ ಮಗಳು ನಮ್ಮ ಶಕ್ತಿ’ ಯೋಜನೆ, ಅಂಗವಿಕಲರಿಗೆ 5,000 ಟ್ರೈಸಿಕಲ್‌ಗಳು, ಅರವತ್ತೈದು ದಾಟಿ ಸ್ವಯಂ ಉದ್ಯೋಗ ಹಿಡಿದ ಹಿರಿಯರಿಗೆ ವೃತ್ತಿ ತೆರಿಗೆ ಮನ್ನಾ,ಅರಣ್ಯ ಮಾಹಿತಿಗಾಗಿ ‘ವನ ವಿಜ್ಞಾನ ಕೇಂದ್ರ’... ಇತರ ಹತ್ತು ಹಲವು ನೂತನ ಕಾರ್ಯಕ್ರಮಗಳ 1996–97ನೇಸಾಲಿನ, ಹೊಸ ತೆರಿಗೆ ಇಲ್ಲದ ಬಜೆಟ್‌ಅನ್ನು ಹಣಕಾಸು ಸಚಿವ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದರು.

ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಜನಸಾಮಾನ್ಯರ ಜೇಬಿಗೆ ಹೆಚ್ಚಿಗೆ ಕತ್ತರಿ ಆಡಿಸದೆ, ಇರುವ ತೆರಿಗೆಗಳನ್ನೇ ಬಹುತೇಕ ಹಗುರಗೊಳಿಸಿ, ತೆರಿಗೆ ಹೆಚ್ಚಳಕ್ಕೆ ಅಲ್ಲಿ–ಇಲ್ಲಿ ಕೈಯಾಡಿಸಿ 132.21 ಕೋಟಿ ರೂಪಾಯಿಗಳ ಖೋತಾ ಬಜೆಟ್‌ ಅನ್ನು ಅವರು ಬಿಡಿಸಿಟ್ಟರು.

ಕನ್ನಡ ಚಿತ್ರಕ್ಕೆ ಪೂರ್ಣ ತೆರಿಗೆ ವಿನಾಯಿತಿ

ಬೆಂಗಳೂರು, ಮಾರ್ಚ್‌ 4– ಕನ್ನಡ ಚಲನಚಿತ್ರಗಳಿಗೆ ಮನರಂಜನಾ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡುವ ಮತ್ತು ಅಶ್ಲೀಲ, ದ್ವಂದ್ವಾರ್ಥ, ಹಿಂಸೆಯನ್ನು ವೈಭವೀಕರಿಸುವ ಚಿತ್ರಗಳಿಗೆ ಸಹಾಯಧನವನ್ನು ಸ್ಥಗಿತಗೊಳಿಸುವ ಮಹತ್ವದ ನಿರ್ಧಾರವನ್ನು ಹಣಕಾಸು ಸಚಿವ ಸಿದ್ದರಾಮಯ್ಯ ಇಂದು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT