ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಬುಧವಾರ, 06–03–1996

Last Updated 5 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ವಿಧಾನ ಪರಿಷತ್ತಿನಲ್ಲಿ ಮಸೂದೆಗೆ ಸೋಲು– ಸರ್ಕಾರಕ್ಕೆ ಆಘಾತ

ಬೆಂಗಳೂರು, ಮಾರ್ಚ್ 5– ಪ್ರತಿಪಕ್ಷಗಳ ಸಂಘಟಿತ ವಿರೋಧದಿಂದಾಗಿ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್ತಿನಲ್ಲಿಂದು ಬಿದ್ದು ಹೋಯಿತು.

ಮಸೂದೆಯನ್ನು ಮತಕ್ಕೆ ಹಾಕುವ ಮುನ್ನ, ತಿದ್ದುಪಡಿ ಮಸೂದೆಯ ಸಾಧಕ ಬಾಧಕಗಳನ್ನು ಪರಿಶೀಲಿಸಲು ಸದನ ಸಮಿತಿ ರಚಿಸಬೇಕು ಎಂದು ವಿರೋಧ ಪಕ್ಷದ ನಾಯಕ ಕಾಂಗೈನ ಎಚ್‌.ಕೆ. ಪಾಟೀಲ್ ಅವರು ಮಂಡಿಸಿದ ಗೊತ್ತುವಳಿಯನ್ನು ತಾಂತ್ರಿಕ ಲೋಪಗಳ ಆಧಾರದ ಮೇಲೆ ಸಭಾಪತಿ ಡಿ.ಬಿ.ಕಲ್ಮಣಕರ್ ಅವರು ತಿರಸ್ಕರಿಸಿದರು.

ಆದರೆ ಭೂ ಸುಧಾರಣಾ ಕಾಯ್ದೆ ಯನ್ನು ಉಲ್ಲಂಘಿಸಿ ಬೆಂಗಳೂರು ನಗರದ ಸುತ್ತಮುತ್ತ ಸಾವಿರಾರು ಎಕರೆ ಭೂಮಿಯನ್ನು ಕಬಳಿಸಿರುವ ಪ್ರಕರಣಗಳ ಬಗ್ಗೆ ವಿಭಾಗಾಧಿಕಾರಿಗಳು ತನಿಖೆ ನಡೆಸಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಗಳನ್ನು ಸದನದ ಮುಂದಿಡಬೇಕು ಎಂಬಎಚ್‌.ಕೆ.ಪಾಟೀಲ್ ಅವರ ಒತ್ತಾಯವನ್ನು ಸಭಾಪತಿಗಳು ಎತ್ತಿ ಹಿಡಿದರು.

ಮೈಸೂರಿಗೆ ಬಂದ ‘ರಮಣ’

ಮೈಸೂರು, ಮಾರ್ಚ್ 5– ಮೈಸೂರು ಮೃಗಾಲಯದಲ್ಲಿ ಬಿಳಿ ಹುಲಿಗಳ ಸಂತಾನ ವನ್ನು ಹೆಚ್ಚಿಸುವುದಕ್ಕಾಗಿ ಹೈದರಾಬಾದಿನ ‘ರಮಣ’ ಮಂಗಳವಾರ ಮೃಗಾಲಯಕ್ಕೆ ಬಂದಿಳಿದ.

ಹೈದರಾಬಾದಿನ ನೆಹರೂಮೃಗಾಲಯದಿಂದ ಬಂದಿರುವ ಈ ‘ರಮಣ’ ವಾಸ್ತವವಾಗಿ ಬಿಳಿ ಹುಲಿ ಅಲ್ಲ. ಆದರೆ ಆತನಲ್ಲಿರುವ ಜೀನ್‌ಗಳು ಮಾತ್ರ ಬಿಳಿ ಹುಲಿಯ ಹುಟ್ಟಿಗೆ ಕಾರಣವಾಗಬಲ್ಲವು. ಒಂದು ಜೊತೆ ಕಪ್ಪು ಹಂಸವನ್ನು ಕೊಟ್ಟು ಅದಕ್ಕೆ ಪ್ರತಿಯಾಗಿ ರಮಣನನ್ನು ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT