ಮಂಗಳವಾರ, ಸೆಪ್ಟೆಂಬರ್ 21, 2021
21 °C

25 ವರ್ಷಗಳ ಹಿಂದೆ: ಶನಿವಾರ 27.7.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕನ್ನಡ ಚಲನಚಿತ್ರ ಅಕಾಡೆಮಿ ರಚನೆ’

ಬೆಂಗಳೂರು, ಜುಲೈ 26– ಕನ್ನಡ ಚಲನಚಿತ್ರೋದ್ಯಮದ ಸಮಗ್ರ ಬೆಳವಣಿಗೆಗಾಗಿ ರಾಜ್ಯ ಸರ್ಕಾರ ‘ಕನ್ನಡ ಚಲನಚಿತ್ರ ಅಕಾಡೆಮಿ’ ರಚಿಸುವುದೆಂದು ಕಾನೂನು ಸಚಿವ ಎಂ.ಸಿ. ನಾಣಯ್ಯ ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಕನ್ನಡ ಚಲನಚಿತ್ರಗಳಿಗೆ ಸಬ್ಸಿಡಿ ಕೊಡುವುದು 615 ಲಕ್ಷ ರೂಪಾಯಿಗಳು ಬಾಕಿ ಇದ್ದು, ಈ ವಾರ 1 ಕೋಟಿ, 3 ತಿಂಗಳಲ್ಲಿ ಮತ್ತೊಂದು ಕೋಟಿ ಬಿಡುಗಡೆ ಮಾಡಲಾಗುವುದು. ಕನ್ನಡ ಚಲನಚಿತ್ರ ರಂಗದ ಅಭಿವೃದ್ಧಿ ಬಗ್ಗೆ ಸರ್ಕಾರವೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಇದು ಸರ್ಕಾರದ ಜವಾಬ್ದಾರಿಯೂ ಅಲ್ಲ, ಆದ್ಯತೆಯ ವಿಷಯವೂ ಅಲ್ಲ. ಆದ್ದರಿಂದ ಈ ಉದ್ಯಮದಲ್ಲಿ ಇರುವವರು ಚಿತ್ರೋದ್ಯಮದ ಪೂರಕ ಸೌಲಭ್ಯ ಹೆಚ್ಚಿಸುವ ಕಡೆಗೆ ಗಮನ ಕೊಡಬೇಕು ಎಂದರು.

‘ಇನ್ನು ಮೇಲೆ ತಯಾರಾದ ಚಿತ್ರಗಳಿಗೆಲ್ಲಾ ಸಬ್ಸಿಡಿ ಕೊಡುವುದಿಲ್ಲ. ಗುಣಮಟ್ಟ ಆಧರಿಸಿ ಕೊಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು