ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಸೋಮವಾರ 27.1.1997

Last Updated 26 ಜನವರಿ 2022, 19:30 IST
ಅಕ್ಷರ ಗಾತ್ರ

ಆಲಮಟ್ಟಿ: ತಜ್ಞರ ವರದಿರಾಜ್ಯಕ್ಕೆ ಪ್ರತಿಕೂಲ

ರಾಯಚೂರು, ಜ. 26– ಆಲಮಟ್ಟಿ ವಿವಾದದ ಹಿನ್ನೆಲೆಯಲ್ಲಿ ಸಂಯುಕ್ತ ರಂಗದ ನಾಲ್ವರು ಮುಖ್ಯಮಂತ್ರಿಗಳುರಚಿಸಿದ್ದ ತಜ್ಞರ ಸಮಿತಿಯು ನೀಡಿರುವ ವರದಿ ರಾಜ್ಯಕ್ಕೆ ಪ್ರತಿಕೂಲವಾಗಿದೆ ಎಂಬ ಬಲವಾದ ಶಂಕೆಯನ್ನು ವಿಧಾನ ಪರಿಷತ್ತಿನ ಸದಸ್ಯ ಎಚ್‌.ಕೆ. ಪಾಟೀಲ್ ಅವರು ಇಲ್ಲಿ ವ್ಯಕ್ತಪಡಿಸಿದರು.

ವರದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ‘ರಾಜ್ಯದ ನೀರಾವರಿ ಯೋಜನೆ ಗಳನ್ನು ವೀಕ್ಷಿಸಿ ಹೋದ ಈ ಸಮಿತಿ ಈಚೆಗೆ ಕಲ್ಕತ್ತದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಅವರಿಗೆ ವರದಿ ನೀಡಿದೆ. ಕರ್ನಾಟಕವು ಕೃಷ್ಣಾ ನದಿ ನೀರನ್ನು ತನ್ನ ಪಾಲಿಗಿಂತ ಹೆಚ್ಚು ಬಳಸಿಕೊಳ್ಳುತ್ತಿದೆ ಎಂಬಂಶ ಇದರಲ್ಲಿ ಇರುವ ಬಗ್ಗೆ ಈಗಾಗಲೇ ಆಂಧ್ರ ಮೂಲದ ಪತ್ರಿಕೆಗಳಲ್ಲಿ ವರದಿಗಳು ಬರಲಾರಂಭಿಸಿವೆ. ಈ ವರದಿಗಳುಸತ್ಯವಾಗಿದ್ದರೆ ಕರ್ನಾಟಕದ ಪಾಲಿಗೆ ನಿಜವಾಗಿಯೂ ಕಳವಳಕಾರಿ ವಿಚಾರವಾಗಿದೆ’ ಎಂದರು.

ಮಲ ಹೊರುವ ಪದ್ಧತಿಗೆ ನಿಷೇಧ

ನವದೆಹಲಿ, ಜ. 26 (ಪಿಟಿಐ)– ಎಲ್ಲಾ ಕೇಂದ್ರಾಡಳಿತ ಪ್ರದೇಶ ಹಾಗೂಆರು ರಾಜ್ಯಗಳಲ್ಲಿ ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ಸರ್ಕಾರ ಇಂದಿನಿಂದ ನಿಷೇಧಿಸಿದೆ.

ಕರ್ನಾಟಕ, ಆಂಧ್ರ ಪ್ರದೇಶ, ಗೋವಾ, ಮಹಾರಾಷ್ಟ್ರ, ತ್ರಿಪುರಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಈ ಅಮಾನವೀಯ ಪದ್ಧತಿ ನಿಷೇಧ ಜಾರಿಗೆ ಬರಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ ಯನ್ನು ಪಂಜಾಬ್, ಅಸ್ಸಾಂ, ಹರಿಯಾಣ ರಾಜ್ಯಗಳು ಈಗಾಗಲೇ ಜಾರಿಗೆ ತಂದಿವೆ.

ಬೊಕ್ಕಸಕ್ಕೆ ಅಧಿಕ ಹೊರೆ ಇಲ್ಲದಂತೆ ಹೊಸ ಜಿಲ್ಲೆ ರಚನೆ ಸಾಧ್ಯತೆ

ಬೆಂಗಳೂರು, ಜ. 26– ‘ರಾಜ್ಯದ ಬೊಕ್ಕಸದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳದಂತೆ ಹೊಸ ಜಿಲ್ಲೆಗಳನ್ನು ರಚಿಸಲು ಸಾಧ್ಯವಿದೆ’.

ಗುಪ್ತಚರ ಇಲಾಖೆ ಸರ್ಕಾರಕ್ಕೆ ಕಳುಹಿಸಿದ ಅಧಿಕೃತ ಟಿಪ್ಪಣಿಯೊಂದರಲ್ಲಿ ಈ ವಿಷಯವನ್ನು ಪ್ರತಿಪಾದಿಸಲಾಗಿದ್ದು, ಹೊಸ ಜಿಲ್ಲಾ ರಚನೆಯಿಂದ ಆಗಬಹುದಾದ ವೆಚ್ಚಗಳನ್ನು ತಗ್ಗಿಸಲು ಕೆಲ ಸಲಹೆ ಸೂಚನೆಗಳನ್ನು ಈ ಸಂಬಂಧ ನೀಡಿದೆ ಎಂದು ಸಚಿವಾಲಯದ ಮೂಲಗಳುತಿಳಿಸಿವೆ.

ಆಡಳಿತಾತ್ಮಕ ಅನುಕೂಲದ ದೃಷ್ಟಿಯಿಂದ ಗದಗ, ಹಾವೇರಿ, ಬಾಗಲಕೋಟೆ, ಗೋಕಾಕ, ಯಾದಗಿರಿ, ಕೊಪ್ಪಳ, ದಾವಣಗೆರೆ, ಚಾಮರಾಜನಗರ ಮತ್ತು ಉಡುಪಿ ಜಿಲ್ಲೆ ಗಳನ್ನು ರಚಿಸಲು ಜ. 17ರಂದು ನಡೆದ ಸರ್ವಪಕ್ಷ ಸಭೆ ಒಪ್ಪಿಗೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT