ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಸೋಮವಾರ, 2–2–1997

Last Updated 1 ಜೂನ್ 2022, 19:30 IST
ಅಕ್ಷರ ಗಾತ್ರ

ಲಾಲೂ ರಾಜೀನಾಮೆಗೆ ಪಾಸ್ವಾನ್‌ ಮತ್ತೆ ಒತ್ತಾಯ

ಚೆನ್ನೈ, ಜೂನ್‌ 1 (ಪಿಟಿಐ)– ಮೇವು ಹಗರಣದ ಆರೋಪಿಯಾದ ಬಿಹಾರ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ಅವರು ರಾಜೀನಾಮೆ ನೀಡಬೇಕು ಎಂದು ರೈಲ್ವೆ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಇಂದು ಇಲ್ಲಿ ಒತ್ತಾಯಿಸಿದರು.

ಭ್ರಷ್ಟಾಚಾರ ಪ್ರಕರಣಗಳು ರಾಜಕೀಯ ಪಕ್ಷಗಳ ವರ್ಚಿಸ್ಸಿಗೆ ಮಸಿ ಬಳಿಯುತ್ತವೆ. ಹಾಗಾಗೀ ಮೇವು ಹಗರಣದಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿರುವ ಲಾಲೂ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಅಸಹನೀಯ
ಆಡಳಿತ– ಬಿಜೆಪಿ ಟೀಕೆ

ಬೆಂಗಳೂರು, ಜೂ.1– ಸಚಿವರ ಹಾಗೂ ಅಧಿಕಾರಿಗಳ ಮೇಲೆ ಮುಖ್ಯಮಂತ್ರಿ ಜಿ.ಎಚ್‌.ಪಟೇಲರಿಗೆ ಹಿಡಿತವೇ ಇಲ್ಲದೆ ಹೇಳುವವರು ಕೇಳುವವರೇ ಇಲ್ಲದಂಥ ದಿಕ್ಕುತಪ್ಪಿದ ಆಡಳಿತವನ್ನು ಕರ್ನಾಟಕದ ಜನ ಅನುಭವಿಸುವಂಥ ದಯನೀಯ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಇಲ್ಲಿ ಇಂದು ಆಪಾದಿಸಿದರು.

ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರ ತನ್ನೆಲ್ಲಾ ಮಿತಿಯನ್ನು ಮೀರಿ ನಾಗರಿಕತೆಯನ್ನೇ ಅಣಕಿಸುವಂತಿತ್ತು. ಈಗ ಪಟೇಲರ ಆಡಳಿತದಲ್ಲಿ ರಾಜಕೀಯ ಸ್ವೇಚ್ಛಾಚಾರವೂ ಇದರೊಂದಿಗೆ ಸೇರಿ ಜನಜೀವನ ಅಸಹನೀಯದ ಹಂತ ಮುಟ್ಟಿದೆ ಎಂದು ಟೀಕಿಸಿದರು.

ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ ನಿಯಂತ್ರಣ ತಪ್ಪಿದ ಆಡಳಿತದ ನೇರ ಪರಿಣಾಮವಾಗಿ ಪ್ರಗತಿ ಚಕ್ರದ ಚಾಲನೆ ಸ್ಥಗಿತಗೊಂಡಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT