ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಬುಧವಾರ, 27 ಆಗಸ್ಟ್ 1997

Last Updated 26 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಪಾಕ್‌ ಜತೆ ಸಂಘರ್ಷ: ಅಮೆರಿಕ ಮಧ್ಯಸ್ಥಿಕೆಗೆ ಭಾರತದ ತಿರಸ್ಕಾರ

ಶ್ರೀನಗರ, ಆಗಸ್ಟ್‌ 26 (ಪಿಟಿಐ)– ಎರಡೂ ದೇಶಗಳು ಆಹ್ವಾನಿಸಿದರೆ ಭಾರತ–ಪಾಕಿಸ್ತಾನದ ನಡುವೆ ಆರಂಭವಾಗಿರುವ ಗಡಿ ಘರ್ಷಣೆಯನ್ನು ಕೊನೆಗೊಳಿಸ‌ಲು ಮಧ್ಯಸ್ಥಿಕೆ ವಹಿಸುವುದಕ್ಕೆ ಅಮೆರಿಕ ಸಿದ್ಧವಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿ
ಯೊಬ್ಬರು ತಿಳಿಸಿದ್ದಾರೆ. ಆದರೆ ಅಮೆರಿಕದ ಈ ಸಲಹೆಯನ್ನು ಭಾರತ ತಿರಸ್ಕರಿಸಿದೆ.

ಮೂರನೇಯವರು ಮಧ್ಯಸ್ಥಿಕೆ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಭಾರತ ಖಡಾಖಂಡಿತವಾಗಿ ಹೇಳಿದೆ.

ಸಿಖ್‌ ಗಲಭೆ: ಮಾಜಿ ಸಚಿವ ಟೈಟ್ಲರ್‌ ವಿಚಾರಣೆಗೆ ಆದೇಶ

ನವದೆಹಲಿ, ಆಗಸ್ಟ್‌ 26 (ಪಿಟಿಐ)– ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಅಮಾಯಕ ಸಿಖ್‌ ಜನರ ಹತ್ಯೆಗೆ
ಪ್ರೇರೇಪಿಸಿದ ಆರೋಪ ಹೊತ್ತಿರುವ ಮಾಜಿ ಕೇಂದ್ರ ಸಚಿವ ಜಗದೀಶ್‌ ಟೈಟ್ಲರ್‌ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ದೆಹಲಿ ಹೈಕೋರ್ಟ್‌ ಇಂದು ಸಿಬಿಐಗೆ ಆದೇಶ ನೀಡಿತು.

ಉತ್ತರ ದೆಹಲಿಯ ಮಲ್ಕಾ ಗಂಜ್‌ನಲ್ಲಿ, 1984 ನವೆಂಬರ್‌ ತಿಂಗಳಲ್ಲಿ ಭುಗಿಲೆದ್ದ ಸಿಖ್‌ ವಿರೋಧಿ ಗಲಭೆಯಲ್ಲಿ ಟೈಟ್ಲರ್‌ ಅವರ ಪ್ರಮುಖ ಪಾತ್ರವಿದೆ ಎಂದು ಮೂವರು ಅರ್ಜಿದಾರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಈ ಆದೇಶ ನೀಡಿದೆ. ಪ್ರಕರಣದಲ್ಲಿ ಶಾಮೀಲಾ ಗಿದ್ದಾರೆನ್ನಲಾದ ಇಬ್ಬರು ದೆಹಲಿ ಪೊಲೀಸ್‌ ಅಧಿಕಾರಗಳ ಬಗ್ಗೆ ವಿಚಾರಣೆಯನ್ನೂ ನಡೆಸುವಂತೆ ಅದು ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT