ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಲೈಂಗಿಕ ಹಗರಣ- ಅಮೆರಿಕ ಅಧ್ಯಕ್ಷ ಕ್ಲಿಂಟನ್ ತಪ್ಪೊಪ್ಪಿಗೆ

Published 18 ಆಗಸ್ಟ್ 2023, 23:47 IST
Last Updated 18 ಆಗಸ್ಟ್ 2023, 23:47 IST
ಅಕ್ಷರ ಗಾತ್ರ

ಬುಧವಾರ 19.8.1998

ಲೈಂಗಿಕ ಹಗರಣ: ಅಮೆರಿಕ ಅಧ್ಯಕ್ಷ ಕ್ಲಿಂಟನ್ ತಪ್ಪೊಪ್ಪಿಗೆ

ವಾಷಿಂಗ್ಟನ್, ಆ. 18 (ಪಿಟಿಐ, ಯುಎನ್ಐ)– ಶ್ವೇತಭವನದ ಸಹಾಯಕಿ ಮೋನಿಕಾ ಲೆವಿನ್‌ಸ್ಕಿ ಜತೆ ತಾವು ‘ಅನುಚಿತ, ಅನೈತಿಕ ಸಂಬಂಧ’ ಹೊಂದಿದ್ದುದಾಗಿ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ನಿನ್ನೆ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ವಿಶೇಷ ಭಾಷಣದಲ್ಲಿ ಒಪ್ಪಿಕೊಂಡರು.

‘ನಾನು ಲೆವಿನ್‌ಸ್ಕಿ ಜತೆ ಉಚಿತವಲ್ಲದ ಅನೈತಿಕ ಲೈಂಗಿಕ ಸಂಬಂಧ ಹೊಂದಿದ್ದುದು ನಿಜ. ಆ ಸಂಬಂಧ ತಪ್ಪು’ ಎಂದು ತಮ್ಮ ಅಧ್ಯಕ್ಷತೆಗೇ ಸಂಚಕಾರ ತರಬಲ್ಲುದಾದ ಲೈಂಗಿಕ ಹಗರಣದ ಕುರಿತು 23 ಸದಸ್ಯರ ನ್ಯಾಯದರ್ಶಿಗಳ ಮಂಡಳಿಗೆ ಐದು ತಾಸುಗಳ ಕಾಲ ಸಾಕ್ಷ್ಯ ನೀಡಿದ ನಂತರ ಮಾಡಿದ ಐದು ನಿಮಿಷಗಳ ಭಾಷಣದಲ್ಲಿ ಕ್ಲಿಂಟನ್ ಒಪ್ಪಿಕೊಂಡರು.

‘ಉಚಿತ– ಅನುಚಿತಗಳ ಬಗೆಗಿನ ವಿವೇಕ ನನಗಿಲ್ಲದೇ ಹೋಯಿತು. ನನ್ನ ವೈಯಕ್ತಿಕ ಸೋಲು ಇದು. ಇದಕ್ಕೆಲ್ಲ ನಾನೊಬ್ಬನೇ ಸಂಪೂರ್ಣವಾಗಿ ಹೊಣೆ’ ಎಂದು ಅವರು ತಮ್ಮ ಭಾಷಣದಲ್ಲಿ ತಪ್ಪೊಪ್ಪಿಕೊಂಡು, ‘ಈ ಮೂಲಕ ನಾನು ನನ್ನ ಪತ್ನಿಯನ್ನೂ ಮಗಳನ್ನೂ ಘಾಸಿಗೊಳಿಸಿದ್ದೇನೆ’ ಎಂದರು.

ಉ.ಪ್ರದೇಶದಲ್ಲಿ ಭೂಕುಸಿತ, ಪ್ರವಾಹ: ನೃತ್ಯ ಕಲಾವಿದೆ ಪ್ರತಿಮಾ ಬೇಡಿ ಸೇರಿ 180 ಮಂದಿ ದುರ್ಮರಣ

ನೈನಿತಾಲ್, ಆ. 18 (ಯುಎನ್ಐ)– ಉತ್ತರಪ್ರದೇಶದ ಪಿತೋರ್‌ಗಢ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಪ್ರವಾಹ ಹಾಗೂ ಭೂಕುಸಿತಕ್ಕೆ ಸಿಲುಕಿ ಕೈಲಾಸ ಮಾನಸ ಸರೋವರ ಯಾತ್ರೆ ಹೊರಟಿದ್ದ ಸುಮಾರು 60 ಮಂದಿಯೂ ಸೇರಿದಂತೆ ಕನಿಷ್ಠ 180 ಜನರು ಸತ್ತಿದ್ದಾರೆ.

ಈ ದುರ್ಘಟನೆಯಲ್ಲಿ ಸತ್ತಿರುವವರ ಪಟ್ಟಿಯಲ್ಲಿ ಹೆಸರಾಂತ ನೃತ್ಯ ಕಲಾವಿದೆ, ಪ್ರತಿಮಾ ಬೇಡಿಯವರ ಹೆಸರೂ ಸೇರಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವಾಲಯವು ಪ್ರಕಟಿಸಿದೆ. 

ಬೆಂಗಳೂರಿನ ಹೊರವಲಯದಲ್ಲಿ ನೃತ್ಯಗ್ರಾಮ ಸ್ಥಾಪಿಸಿ, ಅಲ್ಲೆ ನೆಲೆಸಿದ್ದ ಪ್ರತಿಮಾ, ನಟ ಕಬೀರ್‌ ಬೇಡಿ ಅವರ ಪತ್ನಿ. ನಟಿ ಪೂಜಾಬೇಡಿ ಪ್ರತಿಮಾ ಅವರ ಪುತ್ರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT