ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷದ ಹಿಂದೆ | ರಾಮಮಂದಿರ ಪ್ರಸ್ತಾಪ ಇಲ್ಲ: ಪ್ರಧಾನಿ ವಾಜಪೇಯಿ ಸ್ಪಷ್ಟನೆ

Published 23 ಆಗಸ್ಟ್ 2024, 23:40 IST
Last Updated 23 ಆಗಸ್ಟ್ 2024, 23:40 IST
ಅಕ್ಷರ ಗಾತ್ರ

ರಾಮಮಂದಿರ ಪ್ರಸ್ತಾಪ ಇಲ್ಲ: ಪ್ರಧಾನಿ ಸ್ಪಷ್ಟನೆ

ಅಹಮದಾಬಾದ್‌, ಆ. 23 (ಪಿಟಿಐ)– ಬಿಜೆಪಿಯು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಕಾರ್ಯಸೂಚಿ ಆಧರಿಸಿ ಚುನಾವಣೆ ಎದುರಿಸುತ್ತಿರುವುದರಿಂದ ರಾಮಮಂದಿರ, 370ನೇ ವಿಧಿ ರದ್ದು ಮತ್ತು ಏಕರೂಪ ನಾಗರಿಕ ಸಂಹಿತೆಯಂತಹ ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪಿಸುವುದಿಲ್ಲ ಎಂದು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

‘ಮಂದಿರ ನಿರ್ಮಾಣ, ಏಕರೂಪ ನಾಗರಿಕ ಸಂಹಿತೆ ಮತ್ತು 370ನೇ ವಿಧಿ ರದ್ದು ಒಳಗೊಂಡ ಕಾರ್ಯಸೂಚಿಯನ್ನು ಬಿಜೆಪಿಯು ಈಗಲೂ ಹೊಂದಿದೆ’ ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋವಿಂದಾಚಾರ್ಯ ಅವರ ಹೇಳಿಕೆಗೆ ಅವರು ಆಶ್ಚರ್ಯ ವ್ಯಕ್ತಪಡಿಸಿದರು.

ಚಾಲಕ ತಪ್ಪಿಸಿದ ರೈಲು ದುರಂತ

ಬೆಂಗಳೂರು, ಆ. 23– ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ರೈಲು ದುರಂತವೊಂದು ತಪ್ಪಿರುವ ಘಟನೆ ಇಂದು ಸಂಜೆ ನಗರದಲ್ಲಿ ನಡೆದಿದೆ.

ಸಂಜೆ 6.15ರಲ್ಲಿ ಸುಮಾರು ಒಂದು ಸಾವಿರ ಪ್ರಯಾಣಿಕರೊಂದಿಗೆ ಮೈಸೂರಿಗೆ ಹೊರಟಿದ್ದ ಚಾಮುಂಡಿ ಎಕ್ಸ್‌ಪ್ರೆಸ್‌ ರೈಲು ನಿಲ್ದಾಣ ಬಿಡುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿತು. ಆದರೂ ಎದೆಗುಂದದ ಚಾಲಕ ಬ್ರೇಕ್‌ ಹಾಕಲು ಯತ್ನಿಸಿದ. ಆದರೆ ತಾಂತ್ರಿಕ ತೊಂದರೆಯಿಂದಾಗಿ ಬ್ರೇಕ್‌ ಸರಿಯಾಗಿ ಕೆಲಸ ಮಾಡಲಿಲ್ಲ. ಸ್ವಲ್ಪ ಸಮಯದ ಕಸರತ್ತಿನ ನಂತರ ನಾಯಂಡಹಳ್ಳಿ ಹಾಗೂ ಕೆಂಗೇರಿ ನಡುವೆ ಆರ್‌.ವಿ. ಕಾಲೇಜು ಬಳಿ 6.30ರಲ್ಲಿ ರೈಲು ನಿಲ್ಲಿಸುವಲ್ಲಿ ಯಶಸ್ವಿಯಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT