ದಲ್ಲಾಳಿ ಪಾರೆಖ್ ಬಂಧನ: ಮುಂಬೈ ಪೇಟೆ ಕುಸಿತ

ಮುಂಬೈ, ಮಾರ್ಚ್ 30 (ಪಿಟಿಐ)– ದೇಶದಾದ್ಯಂತ ಷೇರುಪೇಟೆಗಳಲ್ಲಿ ಮತ್ತೊಂದು ಕರಾಳ ಶುಕ್ರವಾರ ದಾಖಲಾಯಿತು. ಮುಂಬೈ ಸಹಿತ ಎಲ್ಲಾಷೇರುಪೇಟೆಗಳೂ ಭಾರಿ ಕುಸಿತ ಕಂಡವು. ಮುಂಬೈ ಪೇಟೆಯಲ್ಲಿ ಮೊದಲ ಪಟ್ಟಿಯ 30 ಷೇರುಗಳ ಸಂವೇದಿ ಸೂಚ್ಯಂಕವು 147 ಅಂಶಗಳಷ್ಟು ಇಳಿಯಿತು.

ಬ್ಯಾಂಕ್ ಆಫ್ ಇಂಡಿಯಾಗೆ 130 ಕೋಟಿ ರೂಪಾಯಿಗಳ ಪಾವತಿ ಬಾಕಿ ಉಳಿಸಿಕೊಂಡಿರುವ ಮುಂಬೈನ ಪ್ರಮುಖ ಷೇರು ದಲ್ಲಾಳಿ ಕೇತನ್ ಪಾರೆಖ್ ಬಂಧನವಾಗಲಿದೆ ಎಂಬ ಗಾಳಿಸುದ್ದಿ ಹಬ್ಬಿದ್ದು, ಷೇರು ಬೆಲೆಗಳ ಭಾರೀ ಕುಸಿತಕ್ಕೆ ಕಾರಣವಾಯಿತು. ಸಂಜೆ ಸಿಬಿಐ ಅಧಿಕಾರಿಗಳು ಕೇತನ್ ಪಾರೆಖ್ನನ್ನು ಬಂಧಿಸಿದ್ದಾರೆ.

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವೃತ್ತಿಶಿಕ್ಷಣದಲ್ಲಿ ಆದ್ಯತೆ

ಬೆಂಗಳೂರು, ಮಾರ್ಚ್ 30– ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವೃತ್ತಿಪರ ತರಗತಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ವಿಧಾನ ಪರಿಷತ್ನಲ್ಲಿ ಇಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.