ನವದೆಹಲಿ, ಜುಲೈ 10 (ಪಿಟಿಐ)– ಸಮಗ್ರ ಅಣ್ವಸ್ತ್ರ ಪರೀಕ್ಷೆ ನಿಷೇಧ ಒಪ್ಪಂದಕ್ಕೆ ಭಾರತ ಸಹಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಲ್ಲಿ ಸ್ಪಷ್ಟಪಡಿಸಿದರು.
‘ಅಣ್ವಸ್ತ್ರ ಶಕ್ತ ರಾಷ್ಟ್ರಗಳಿಗೆ ಭಾರತ ಮಣಿಯುವುದಿಲ್ಲ. ನಮ್ಮ ಅಣ್ವಸ್ತ್ರ ತಯಾರಿಕೆ ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಯಾವ ರಾಷ್ಟ್ರವೂ ಸ್ಥಗಿತಗೊಳಿಸುವಂತಿಲ್ಲ’ ಎಂದು ಹೇಳಿದರು.
ವಿದೇಶಾಂಗ ವ್ಯವಹಾರಗಳ ಖಾತೆಯ ಕಾರ್ಯವೈಖರಿಯ ಬಗೆಗಿನ ಪ್ರಶ್ನೆಗಳಿಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ಪ್ರಧಾನಿ, ‘ಭಾರತ ಮತ್ತು ಪಾಕಿಸ್ತಾನ ‘ಮೊದಲು ಅಣ್ವಸ್ತ್ರ ಪ್ರಯೋಗಿಸುವುದಿಲ್ಲ’ ಎಂಬ ಒಪ್ಪಂದಕ್ಕೆ ಮೊದಲು ಸಹಿ ಹಾಕಬೇಕು. ಬಳಿಕ ಎಲ್ಲ ಅಣ್ವಸ್ತ್ರ ರಾಷ್ಟ್ರಗಳೂ ನಿಗದಿತ ಕಾಲಮಿತಿಯಲ್ಲಿ ಅಣ್ವಸ್ತ್ರಗಳನ್ನು ನಾಶಪಡಿಸುವಂತೆ ಜಂಟಿಯಾಗಿ ಒತ್ತಡ ತರಬೇಕು’ ಎಂದು ಹೇಳಿದರು.
13ರಂದು ಮಹಿಳಾ ಮಸೂದೆ ಮಂಡನೆ: ಪ್ರಧಾನಿ ಘೋಷಣೆ
ನವದೆಹಲಿ, ಜುಲೈ 10 (ಪಿಟಿಐ)– ಮಹಿಳಾ ಮೀಸಲಾತಿ ಮಸೂದೆಯನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಂದು ಘೋಷಿಸಿದರು.
ಈ ವಿಷಯದ ಬಗ್ಗೆ ಏರ್ಪಡಿಸಿದ್ದ ಸರ್ವಪಕ್ಷಗಳ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರ ಅಭಿಪ್ರಾಯಗಳನ್ನು ಕೇಳಿದ ನಂತರ ಪ್ರಧಾನಿ ಅವರು ಈ ಘೋಷಣೆ ಮಾಡಿದರು ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮದನ್‌ಲಾಲ್ ಖುರಾನ ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.