ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ ಈ ದಿನ | ನಕಲಿ ಅಂಕಪಟ್ಟಿ ಹಾವಳಿ ತಡೆಗೆ ಹಾಲೋಗ್ರಾಂ

25 ವರ್ಷಗಳ ಹಿಂದೆ ಈ ದಿನ|ಜುಲೈ 12
Published 11 ಜುಲೈ 2023, 19:28 IST
Last Updated 11 ಜುಲೈ 2023, 19:28 IST
ಅಕ್ಷರ ಗಾತ್ರ

ನಕಲಿ ಅಂಕಪಟ್ಟಿ ಹಾವಳಿ ತಡೆಗೆ ಹಾಲೋಗ್ರಾಂ

ಧಾರವಾಡ, ಜುಲೈ 11– ನಕಲಿ ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರಗಳನ್ನು ಸೃಷ್ಟಿ
ಸುವುದನ್ನು ತಡೆಗಟ್ಟಲು ಅಧಿಕೃತ ಅಂಕಪಟ್ಟಿಗಳಲ್ಲಿ ಕರ್ನಾಟಕ ವಿಶ್ವವಿದ್ಯಾ
ನಿಲಯದ ಲಾಂಛನದ ಹಾಲೋಗ್ರಾಮ್‌ ಬಳಸಲು ಕರ್ನಾಟಕ ವಿಶ್ವವಿದ್ಯಾನಿಲಯ ಆಲೋಚಿಸುತ್ತಿದೆ ಎಂದು ಕುಲಪತಿ ಡಾ. ಎ.ಎಂ.ಪಠಾಣ್‌ ತಿಳಿಸಿದರು.

ಹಾಲೋಗ್ರಾಂ ಬಳಕೆಯಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ದೇಶದ ಎರಡನೆಯ ವಿಶ್ವವಿದ್ಯಾನಿಲಯ ಆಗಲಿದೆ. ಕಾಶ್ಮೀರವಿಶ್ವವಿದ್ಯಾನಿಲಯ ಈಗಾಗಲೇ ಯಶಸ್ವಿಯಾಗಿ ಬಳಕೆ ಮಾಡಿಕೊಂಡಿದೆ. ಗುಜರಾತಿನ ಪ್ರೌಢಶಾಲಾ ಪರೀಕ್ಷಾ ಮಂಡಳಿಯು ಹಾಲೋಗ್ರಾಂ ಬಳಸಿದ್ದು, ನಕಲು ಮಾಡುವ ಪ್ರಯತ್ನವನ್ನು ತಡೆಗಟ್ಟಬಹುದು ಎನ್ನುವುದು ದೃಢಪಟ್ಟಿದೆ. ವಿಶ್ವವಿದ್ಯಾನಿಲಯದ ಲಾಂಛನದ ಹಾಲೋಗ್ರಾಂ ಪೂರೈಸಲು ಫ್ರಾನ್ಸ್‌ ದೇಶದ ಸಂಸ್ಥೆಯೊಂದನ್ನು ಸಂಪರ್ಕಿಸಲಾಗಿದೆ. ಹಾಲೋಗ್ರಾಂ ಅನ್ನು ನಕಲು ಮಾಡಲು ಅಥವಾ ಅಳಿಸಲು ಸಾಧ್ಯವಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT