ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಬುಧವಾರ 24.4.1996

25 ವರ್ಷಗಳ ಹಿಂದೆ ಬುಧವಾರ 24.4.1996
Last Updated 23 ಏಪ್ರಿಲ್ 2021, 18:08 IST
ಅಕ್ಷರ ಗಾತ್ರ

ಜಯಾ ಅನರ್ಹತೆ ಪ್ರಶ್ನೆ ಆಯೋಗದ ತೀರ್ಮಾನಕ್ಕೆ

ನವದೆಹಲಿ, ಏ. 23 (ಪಿಟಿಐ)– ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಬಗ್ಗೆ ಬಹುಸದಸ್ಯರ ಚುನಾವಣಾ ಆಯೋಗ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.

ತಮ್ಮನ್ನು ಅನರ್ಹಗೊಳಿಸುವ ವಿಷಯದಲ್ಲಿ ಮುಖ್ಯ ಚುನಾವಣಾ ಕಮಿಷನರ್ ಟಿ.ಎನ್.ಶೇಷನ್ ಅವರು ಪೂರ್ವಗ್ರಹಪೀಡಿತರಾಗಿದ್ದಾರೆ ಎಂಬ ಜಯಲಲಿತಾ ಅವರ ಮನವಿಯನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿರುವ ಹಿನ್ನೆಲೆಯಲ್ಲಿ, ಆಯೋಗದ ಉಳಿದ ಇಬ್ಬರು ಸದಸ್ಯರು (ಶೇಷನ್ ಹೊರತುಪಡಿಸಿ) ಸಭೆ ಸೇರಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.

ಶೀಲಾ ಕೌಲ್‌ಗೆ ನಿರೀಕ್ಷಣಾ ಜಾಮೀನು

ಶಿಮ್ಲಾ, ಏ. 23 (ಪಿಟಿಐ)– ವಸತಿ ಹಗರಣದಲ್ಲಿ ಆರೋಪಕ್ಕೊಳಗಾಗಿರುವ ಮಾಜಿ ರಾಜ್ಯಪಾಲೆ ಶೀಲಾ ಕೌಲ್‌ ಅವರಿಗೆ ಹಿಮಾಚಲ ಹೈಕೋರ್ಟ್‌ ಇಂದು ನಿರೀಕ್ಷಣಾ ಜಾಮೀನು ನೀಡಿತು.

ಇದೇ ವೇಳೆ ರಾಜ್ಯಪಾಲರ ಸಂವಿಧಾನಾತ್ಮಕ ವಿನಾಯಿತಿ ಬಗ್ಗೆ ಪರಿಶೀಲನೆ ಇಲ್ಲ ಎಂದೂ ತೀರ್ಪಿನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT