ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: 04–10–1997

Last Updated 3 ಅಕ್ಟೋಬರ್ 2022, 20:15 IST
ಅಕ್ಷರ ಗಾತ್ರ

l ಅಭಾವ ಪರಿಸ್ಥಿತಿ ಕಾರಣ ದಸರಾ ಮೆರವಣಿಗೆ, ಪಂಜಿನ ಪರೇಡ್‌ ರದ್ದು

ಬೆಂಗಳೂರು, ಅಕ್ಟೋಬರ್‌ 3– ಮೈಸೂರಿನಲ್ಲಿ ದಸರಾ ಉತ್ಸವದ ಅಂಗವಾಗಿ ವಿಜಯದಶಮಿ ದಿನ ನಡೆಸಲು ಉದ್ದೇಶಿಸಲಾಗಿದ್ದ ಮೆರವಣಿಗೆ ಮತ್ತು ಪಂಜಿನ ಪ‍ರೇಡ್‌ ಅನ್ನು ರಾಜ್ಯದಲ್ಲಿರುವ ಅಭಾವ ಪರಿಸ್ಥಿತಿ ಕಾರಣ ರದ್ದುಗೊಳಿಸಲಾಗಿದೆ.

ಅನಾವೃಷ್ಟಿಯ ಪರಿಣಾಮವಾಗಿ ದಸರಾ ಉತ್ಸವ ಸಂಬಂಧದ ವೆಚ್ಛವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ.

ಇಂದು ಇಲ್ಲಿ ಸೇರಿದ್ದ ಉತ್ಸವ ಸಮಿತಿಯ ತುರ್ತು ಸಭೆಯಲ್ಲಿ ಕಾರ್ಯಂತ ಈ ನಿರ್ಧಾರಗಳನ್ನು ಸಮಿತಿಯ ಅಧ್ಯಕ್ಷ ಹಾಗೂ ಕಾರ್ಮಿಕ ಸಚಿವ ಅಜೀಜ್‌ ಸೇಠ್‌ರವರು ಸಂಜೆ ಸುದ್ದಿಗಾರರಿಗೆ ತಿಳಿಸಿದರು.

l ಭಾರತದ ಶಾಂತಿಪರ, ಮೈತ್ರಿ ನೀತಿಗೆ ಹೊಸ ಸಮರ್ಥನೆ ಅನಗತ್ಯ

ಬೊಕಾರೋ, ಅಕ್ಟೋಬರ್‌ 3– ಪಾಕಿಸ್ತಾನವೂ ಸೇರಿ ಎಲ್ಲ ರಾಷ್ಟ್ರಗಳೊ
ಡನೆಯೂ ಮೈತ್ರಿಯಿಂದಿರಬೇಕೆಂಬುದೇ ಭಾರತದ ಅಪೇಕ್ಷೆ; ಅದಕ್ಕೆ ಹೊಸ ಸಮರ್ಥನೆ ಅನಗತ್ಯ ಎಂದು ಪ್ರಧಾನಿ ಇಂದಿರಾಗಾಂಧಿ ಅವರು ಇಂದು ಪುನಃ ಒತ್ತಿ ನುಡಿದರು.

ಈ ಉಕ್ಕು ಕಾರ್ಖಾನೆಯ ನಗರದಲ್ಲಿ ಎರಡೂವರೆ ಲಕ್ಷಕ್ಕಿಂತ ಹೆಚ್ಚು ಜನರು ಸೇರಿದ್ದ ಸಭೆಯಲ್ಲಿ ಭಾಷಣ ಮಾಡಿದ ಅವರು, ಭಾರತ ಉಪಖಂಡದಲ್ಲಿ ಶಾಂತಿ ಸ್ಥಾಪನೆ ವಿಷಯದಲ್ಲಿ ಭಾರತಕ್ಕೆ ಅಷ್ಟು ಆಸಕ್ತಿ ಇಲ್ಲವೆಂಬ ಹಾಗೂ ಅದಕ್ಕೆ ಆತ್ಮ ಸಾಕ್ಷಿಯಾಗಿ ಪಾಕಿಸ್ತಾನದ ಜತೆ ಮೈತ್ರಿಯ ಅಭಿಲಾಷೆ ಇಲ್ಲವೆಂಬ ಪತ್ರಿಕಾ ವರದಿಗಳನ್ನು ಪ್ರಸ್ತಾಪಿಸಿ, ಪ್ರಧಾನಿ ಭಾರತದ ನಿಲುವನ್ನು ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT