ಬಿಸಿಲಿನ ತಾಪಕ್ಕೆ ಓರ್ವನ ಬಲಿ

ಬೀದರ್, ಮೇ 10– ಕಡುಬಿಸಿಲಿನ ತಾಪಕ್ಕೆ ಜಿಲ್ಲೆಯ ಬಸವಕಲ್ಯಾಣದಲ್ಲಿ ವ್ಯಕ್ತಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಪಟ್ಟಣದ ದೂರಸಂಪರ್ಕ ಇಲಾಖೆಯ ಉದ್ಯೋಗಿ ಶರಣಪ್ಪ ಸಾಗರ (35) ಮೃತಪಟ್ಟ ವ್ಯಕ್ತಿ. ಈತ ತಮ್ಮ ಮನೆ ಮಾಲೀಕರ ಮದುವೆ ನಿಮಿತ್ತ ಕಳೆದ ಎರಡು ಮೂರು ದಿನಗಳಿಂದ ಓಡಾಡಿದ್ದು, ನಿನ್ನೆ ಸಂಜೆ ಮನೆಯಲ್ಲಿ ನೀರು ಕುಡಿದಾಗ ಹಠಾತ್ತನೆ ಕುಸಿದು ಬಿದ್ದ ಎನ್ನಲಾಗಿದೆ.

ನೀರು ಕುಡಿದ ತಕ್ಷಣ ಅಸ್ವಸ್ಥಗೊಂಡ ಈತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಬಿಸಿಲಿನ ತಾಪದಿಂದಲೇ ಸತ್ತಿರಬಹುದೆಂದು ವೈದ್ಯರು ಶಂಕಿಸಿದ್ದಾರೆ.

ಘಾನಾ ಫುಟ್ಬಾಲ್ ಕ್ರೀಡಾಂಗಣ ಭೀಕರ ದುರಂತ: 130 ಸಾವು

ಅಕ್ರಾ, ಮೇ 10– ನಗರದ ಫುಟ್ಬಾಲ್ ಕ್ರೀಡಾಂಗಣವೊಂದರಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ದುರಂತದಲ್ಲಿ 130 ಮಂದಿ ಸತ್ತಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಈ ಮೊದಲು ದುರ್ಘಟನೆಯಲ್ಲಿ 120 ಮಂದಿ ಸತ್ತಿದ್ದಾರೆ ಎಂದು ಸ್ಥಳೀಯ ರೇಡಿಯೊ ವರದಿ ಮಾಡಿತ್ತು. ಆದರೆ, ವೈದ್ಯಕೀಯ ಮೂಲಗಳ ಪ್ರಕಾರ ಸತ್ತವರ ಸಂಖ್ಯೆ 130 ಆಗಿದೆ. ದಕ್ಷಿಣ ಆಫ್ರಿಕಾದ ಫುಟ್ಬಾಲ್ ಇತಿಹಾಸದಲ್ಲಿ ನಡೆದ ಘೋರ ದುರಂತ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.