ಬೆಂಗಳೂರು, ಮೇ 25– ಒಂದರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಸುಮಾರು 1.10 ಕೋಟಿ ವಿದ್ಯಾರ್ಥಿಗಳಿಗೆ ಕ್ಷೇಮ ವಿಮಾ ಯೋಜನೆಯನ್ನು ರಾಜ್ಯ ಸರ್ಕಾರ 2001–2002ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ತಂದಿದೆ.

ರಾಜ್ಯ ಶಿಕ್ಷಕ ಕಲ್ಯಾಣ ನಿಧಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ರೋಟರಿ ಸಂಸ್ಥೆಯಿಂದ ದಿ ಓರಿಯಂಟಲ್ ಇನ್ಶ್ಯೂರೆನ್ಸ್ ಸಂಸ್ಥೆಯ ಮೂಲಕ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್. ವಿಶ್ವನಾಥ್ ಇಲ್ಲಿ ತಿಳಿಸಿದರು.

ಭಾರತ ಭೇಟಿ: ಮುಷರಫ್ಗೆ ಆಹ್ವಾನ ಪತ್ರ ಹಸ್ತಾಂತರ

ನವದೆಹಲಿ, ಮೇ 25 (ಪಿಟಿಐ)– ಸೇನಾಧಿಕಾರಿ ಜನರಲ್ ಪರ್ವಿಜ್ ಮುಷರಫ್ ಅವರಿಗೆ ವಾಜಪೇಯಿ ಅವರ ಮಾತುಕತೆ ಆಹ್ವಾನವನ್ನು ಭಾರತದ ಉಸ್ತುವಾರಿ ಹೈಕಮಿಷನರ್ ಸುಧೀರ್ ವ್ಯಾಸ್ ಅವರು, ಇಂದು ಪಾಕಿಸ್ತಾನದ ವಿದೇಶಾಂಗ ಕಚೇರಿಗೆ ಹಸ್ತಾಂತರಿಸಿದರು.

ಇಸ್ಲಾಮಾಬಾದಿನಲ್ಲಿ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಇನಾಮುಲ್ ಹಕ್ ಅವರನ್ನು ಇಂದು ಬೆಳಗ್ಗೆ ಭೇಟಿ ಮಾಡಿದ ವ್ಯಾಸ್, ಮುಷರಫ್ ಮತ್ತು ಬೇಗಂ ಮುಷರಫ್ ಅವರನ್ನು ಭಾರತಕ್ಕೆ ಆಹ್ವಾನಿಸುವ ಪತ್ರವನ್ನು ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.