ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ ಇದೇ ದಿನ ಅಫ್ಗನ್‌ನಲ್ಲಿ ಭೂಕಂಪವಾಗಿ ಮೃತಪಟ್ಟಿದ್ದರು 4,000 ಜನ

Last Updated 7 ಫೆಬ್ರುವರಿ 2023, 6:39 IST
ಅಕ್ಷರ ಗಾತ್ರ

ಆಫ್ಘಾನಿಸ್ತಾನದಲ್ಲಿ ಭೂಕಂಪ 4,000 ಸಾವು
ಇಸ್ಲಾಮಾಬಾದ್‌, ಫೆ. 6 (ಡಿಪಿಎ, ರಾಯಿಟರ್ಸ್‌)–
ಆಫ್ಘಾನಿಸ್ತಾನದ ತಖ್ಖರ್‌ ಪ್ರಾಂತ್ಯದಲ್ಲಿ ಬುಧವಾರ ಸಂಜೆ ಭಾರಿ ಭೂಕಂಪ ಸಂಭವಿಸಿ ಕನಿಷ್ಠ ನಾಲ್ಕು ಸಾವಿರ ಜನರು ಸತ್ತಿದ್ದಾರೆ.

ತಾಜೆಕ್‌ ರಾಜಧಾನಿ ದುಶಂಬೆಯಲ್ಲಿ ದುರಂತದ ಸುದ್ದಿಯನ್ನು ಆಫ್ಘನ್‌ ರಾಯಭಾರಿ ಕಚೇರಿ ಪ್ರಕಟಿಸಿತು. ರಿಕ್ಟರ್‌ ಮಾಪಕದಲ್ಲಿ 6.1ರಷ್ಟಿದ್ದ ಕಂಪನದ ಕೇಂದ್ರಬಿಂದು ಲೋಸ್ತಾಕ್‌ ಗ್ರಾಮದಲ್ಲಿತ್ತು.

ಬೊಫೋರ್ಸ್‌ ಲಂಚ ಸೋನಿಯಾಗೆ ಗೊತ್ತು: ವಿವರ ಬಹಿರಂಗಕ್ಕೆ ಅಡ್ವಾಣಿ ಒತ್ತಾಯ
ಫೈಜಾಬಾದ್‌ (ಉತ್ತರ ಪ್ರದೇಶ), ಫೆ. 6 (ಪಿಟಿಐ)–
ಬೊಫೋರ್ಸ್‌ ಫಿರಂಗಿ ಖರೀದಿ ಹಗರಣದ ಬಗ್ಗೆ ಸೋನಿಯಾ ಗಾಂಧಿ
ಅವರು ತಮಗೆ ಗೊತ್ತಿರುವ ಮಾಹಿತಿಯನ್ನು ಭಾರತದ ಜನತೆಗೆ ತಿಳಿಸಬೇಕು ಎಂಬ ಸ್ವಿಸ್‌ ಸರ್ಕಾರದ ಹೇಳಿಕೆಗೆ ಸೋನಿಯಾ ಅವರು ತಕ್ಷಣ ಪ್ರತಿಕ್ರಿಯಿಸಬೇಕು ಎಂದು ಬಿಜೆಪಿ ಅಧ್ಯಕ್ಷ ಎಲ್‌.ಕೆ. ಅಡ್ವಾಣಿ ಅವರು
ಒತ್ತಾಯಿಸಿದ್ದಾರೆ.

‘ತಮಗೆ ಗೊತ್ತಿರುವ ಮಾಹಿತಿಯನ್ನು ತಿಳಿಸಬೇಕು ಹಾಗೂ ಈ ಸಂಬಂಧ ತಿಳಿಸಲು ಅದಕ್ಕಿಂತ ಹೆಚ್ಚಿನದೇನೂ ಇಲ್ಲ’ ಎಂಬ ಸ್ವಿಸ್ ಪ್ರಧಾನಮಂತ್ರಿ ಕಚೇರಿಯ ಹೇಳಿಕೆ ‘ಮಹತ್ವವಾದುದು’ ಎಂದು ಅಡ್ವಾಣಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT