ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷದ ಹಿಂದೆ | ಜಾಗತಿಕ ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ಯತ್ನ – ಅಟಲ್

Published : 22 ಆಗಸ್ಟ್ 2024, 23:49 IST
Last Updated : 22 ಆಗಸ್ಟ್ 2024, 23:49 IST
ಫಾಲೋ ಮಾಡಿ
Comments

ಜಾಗತಿಕ ನಿಶ್ಶಸ್ತ್ರೀಕರಣಕ್ಕೆ ಯತ್ನ – ಅಟಲ್

ನವದೆಹಲಿ,ಆ.22(ಪಿಟಿಐ): ಜಾಗತಿಕ ಅಣ್ವಸ್ತ್ರ ನಿಶ್ಶಸ್ತ್ರೀಕರಣದ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ತನ್ನ ಯತ್ನಗಳನ್ನು ಭಾರತ ಮುಂದುವರೆಸುವುದಾಗಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಧೃಡಪಡಿಸಿದರು.

ಇಲ್ಲಿ ಜೈನ ಮುನಿ ಶ್ರೀ ಆನಂದ ಋಷಿ ಮಹಾರಾಜನ್ ಅವರ ಜನ್ಮಶತಮಾನೋತ್ಸವವನ್ನು ಉದ್ಘಾಟಿಸಿ ಅವರು ಮಾತಾನಾಡಿದ್ದರು.

ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗಲೇ ಭಾರತ, ಸಂಪೂರ್ಣ ನಿಶ್ಶಸ್ತ್ರೀಕರಣ ಮತ್ತು ಎಲ್ಲ ಅಣ್ವಸ್ತ್ರಗಳನ್ನು ನಾಶಗೊಳಿಸುವುದನ್ನು ಕೋರಿ ವಿಶ್ವಸಂಸ್ಥೆಗೆ ಪ್ರಸ್ತಾಪ ಸಲ್ಲಿಸಿತ್ತು ಎಂದು ಪ್ರಧಾನಿ ತಿಳಿಸಿದರು.

ಈ ರೀತಿಯ ಯತ್ನಗಳಿಗೆ ಯಶಸ್ಸು ಏಕಾಏಕಿ ಲಭಿಸುವುದಿಲ್ಲ. ಅಹಿಂಸೆಯೇ ಶ್ರೇಷ್ಠ ಧರ್ಮವಾಗಿರುವುದರಿಂದ ನಿಶ್ಶಸ್ತ್ರೀಕರಣವನ್ನು ಪೂರ್ಣಗೊಳಿಸುವ ಯತ್ನಗಳು ಇನ್ನೂ ನಡೆದಿವೆ ಎಂದು ಅವರು ಹೇಳಿದರು.

2ನೇ ಹಂತದ ಕಾಂಗ್ರೆಸ್ ಪಟ್ಟಿ ಸಿದ್ಧ

ನವದೆಹಲಿ, ಆ.22(ಪ್ರಜಾವಾಣಿ ವಾರ್ತೆ): ಕಾರ್ನಾಟಕದಲ್ಲಿ ನಡೆಯಲಿರುವ ಎರಡನೇ ಹಂತದ ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಎಸ್‌.ಎಂ. ಕೃಷ್ಣ ಹಿರಿಯ ನಾಯಕರಾದ  ಡಿ.ಬಿ.ಚಂದ್ರೇಗೌಡ, ಎಸ್‌.ಬಿ ಸಿದ್ನಾಳ್, ಕಾಗೋಡು ತಿಮ್ಮಪ್ಪ, ಎಚ್ ವಿಶ್ವನಾಥ್ ಮತ್ತು ಆರ್.ವಿ.ದೇಶಪಾಂಡೆ ಅವರು ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಪ್ರಮುಖರು.

ಹಾಸನದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ವಿರುದ್ಧ ಬಲಿಷ್ಠ ಅಭ್ಯರ್ಥಿ ಹಾಕಬೇಕೆನ್ನುವ ಕಾರಣಕ್ಕಾಗಿ ಜಿಲ್ಲೆಯಲ್ಲಿ ಎರಡು ಗುಂಪಾಗಿದ್ದ ಶ್ರೀಕಂಠಯ್ಯ ಮತ್ತು ಪುಟ್ಟಸ್ವಾಮಿಗೌಡ ಅವರ ನಡುವೆ ಸಾಮರಸ್ಯ ಉಂಟು ಮಾಡಿ ರಾಜಿ ಮಾಡಿಸಲಾಗಿದೆ. ಇದರ ಪ್ರಯತ್ನವಾಗಿ ದೇವೇಗೌಡರ ರಾಜಕೀಯ ಕಟ್ಟಾ ವಿರೋಧಿ ಎಂದೇ ಖ್ಯಾತಿಯಾಗಿರುವ ಜಿ. ಪುಟ್ಟಸ್ವಾಮಿಗೌಡ ಅವರನ್ನು ಸ್ವರ್ಧೆಗೆ ಇಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT