ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ | ‘ಚಕ್ರ’ ಚಿಹ್ನೆ, ದಳ ಹೆಸರು ಬಳಕೆಗೆ ಆಯೋಗ ನಿಷೇಧ

Published 7 ಆಗಸ್ಟ್ 2024, 23:33 IST
Last Updated 7 ಆಗಸ್ಟ್ 2024, 23:33 IST
ಅಕ್ಷರ ಗಾತ್ರ

ನವದೆಹಲಿ, ಆ. 7– ಚುನಾವಣಾ ಆಯೋಗವು ಇಂದು ಜನತಾದಳದ ‘ಚಕ್ರ’ ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಂಡು, ಎಚ್‌.ಡಿ. ದೇವೇಗೌಡ ಮತ್ತು ಶರದ್ ಯಾದವ್ ಬಣಗಳೆರಡಕ್ಕೂ ತಾತ್ಕಾಲಿಕವಾಗಿ ರಾಷ್ಟ್ರೀಯ ಪಕ್ಷಗಳ ಸ್ಥಾನಮಾನ ನೀಡಿ ತಾತ್ಕಾಲಿಕ ಆಜ್ಞೆ ಹೊರಡಿಸಿತು.

ಜನತಾದಳವು ಜುಲೈ 20ರಂದು ಇಬ್ಭಾಗವಾದ ಹಿನ್ನೆಲೆಯಲ್ಲಿ, ಎಚ್‌.ಡಿ. ದೇವೇಗೌಡರ ನೇತೃತ್ವದ ಬಣವು ಸಲ್ಲಿಸಿದ ಅರ್ಜಿಯ ವಿಚಾರಣೆ ನಂತರ ಚುನಾವಣಾ ಆಯೋಗ ಈ ಆಜ್ಞೆ ಹೊರಡಿಸಿತು.

ಈ ಎರಡು ಬಣಗಳು ಬರಲಿರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ
ಗಳಲ್ಲಿ ಜನತಾದಳದ ಹೆಸರನ್ನು ಬಳಸುವುದಕ್ಕೆ ಚುನಾವಣಾ ಆಯೋಗವು ನಿಷೇಧ ಹೇರಿದೆ. ನಾಳೆ ಒಳಗೆ ತಮ್ಮ ಬಣಗಳ ಹೆಸರುಗಳನ್ನು ತಿಳಿಸಲು ಸೂಚಿಸಿದೆ.

ದಳ ಸಖ್ಯ ತೊರೆದು ಸ್ಥಾನ ಹೊಂದಾಣಿಕೆಗೆ ಬನ್ನಿ: ಬಿಜೆಪಿ

ಬೆಂಗಳೂರು, ಆ. 7 – ಮುಖ್ಯಮಂತ್ರಿ ಜೆ.ಎಚ್. ಪಟೇಲ್ ನೇತೃತ್ವದ ಜನತಾದಳದ ಜತೆ ಲೋಕಶಕ್ತಿಯ ನಾಯಕರು ಕಳೆದ ಎರಡು ವಾರಗಳಿಂದ ನಡೆಸುತ್ತಿರುವ ‘ಮಧುಚಂದ್ರ’ಕ್ಕೆ ಇತಿಶ್ರೀ ಹೇಳಿ, ಸ್ಥಾನಗಳ ಹೊಂದಾಣಿಕೆ ಸಂಬಂಧ ಮಾತುಕತೆಗೆ ಬರಬೇಕು ಎಂದು ರಾಜ್ಯ ಬಿಜೆಪಿ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT