ನವದೆಹಲಿ, ಆಗಸ್ಟ್ 10 (ಪಿಟಿಐ, ಯುಎನ್‌ಐ)– ಗುಜರಾತ್‌ನಲ್ಲಿ ಭಾರತದ ಗಡಿಯೊಳಗೆ ಸುಮಾರು 10 ಕಿ.ಮೀ. ಗಳಷ್ಟು ದೂರ ಅಕ್ರಮವಾಗಿ ಪ್ರವೇಶಿಸಿದ್ದ ಪಾಕಿಸ್ತಾನ ನೌಕಾಪಡೆಯ ಯುದ್ಧ ವಿಮಾನವನ್ನು ಭಾರತ ಇಂದು ಬೆಳಿಗ್ಗೆ ಹೊಡೆದುರುಳಿಸಿದೆ.
ಎಲ್ಲ 16 ಸಿಬ್ಬಂದಿ ಸತ್ತಿದ್ದಾರೆ ಎಂದು ಪಾಕಿಸ್ತಾನ ತಿಳಿಸಿದೆ. ಕಾರ್ಗಿಲ್ ಕದನ ಅಂತ್ಯಗೊಂಡ ಶಾಂತಿಯ ಕಾಲದಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ತಾನವು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದೆ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಲಾಗುತ್ತಿದೆ