ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಗುರುವಾರ 22–8–1996

Last Updated 21 ಆಗಸ್ಟ್ 2021, 20:30 IST
ಅಕ್ಷರ ಗಾತ್ರ

ಪ್ರಧಾನಿ ಭೇಟಿಗೆ ಮುನ್ನವೇ ಭುಗಿಲೆದ್ದ ಆಕ್ರೋಶ: ಹುಬ್ಬಳಿ ಉದ್ರಿಕ್ತ, 2 ಬಸ್‌ಗೆ ಬೆಂಕಿ, ಲಾಠಿ ಪ್ರಹಾರ, ಅಶ್ರುವಾಯು

ಹುಬ್ಬಳ್ಳಿ ಆ.21– ಪ್ರಧಾನಿ ದೇವೇಗೌಡರು ಆಗಮಿಸುವ ಮುನ್ನಾ ದಿನವಾದ ಇಂದು ನಗರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಎರಡು ಬಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರದಲ್ಲಿ ತೊಡಗಿದ್ದವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಪ್ರಯೋಗಿಸಿದರು.

ನೈರುತ್ಯ ರೈಲ್ವೆ ವಲಯವನ್ನು ಹುಬ್ಬಳ್ಳಿಯಲ್ಲಿಯೇ ಸ್ಥಾಪಿಸಲು ಆಗ್ರಹಿಸಿ ಉತ್ತರ ಕರ್ನಾಟಕ ಅಭಿವೃದ್ಧಿ ಪರ ಹೋರಾಟ ಸಮಿತಿ ನಾಳೆ ಹುಬ್ಬಳ್ಳಿ ಬಂದ್‌ಗೆ ಕರೆ ನಡಿದ್ದು, ಬಂದ್‌ ಪರ ಮತ್ತು ವಿರೋಧಿ ಗುಂಪುಗಳ ಮೆರವಣಿಗೆ, ಘೋಷಣೆ, ಸಮಿತಿಯ ಸದಸ್ಯರ ನಿರಶನ ಮುಂತಾದ ಘಟನೆಗಳಿಂದ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಶೋಕ ಕಾಟವೆ, ಜಗದೀಶ ಶೆಟ್ಟರ, ಸಂಸತ್‌ ಸದಸ್ಯ ವಿಜಯ ಸಂಕೇಶ್ವರ ಸೇರಿದಂತೆ 136 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಕಮಿಶನರ್‌ ಡಿ.ವಿ.ಗುರುಪ್ರಸಾದ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT