ಆಸ್ತಿ ವಿವರ ಸಲ್ಲಿಸದ ಶಾಸಕರ ಮಾಹಿತಿಗೆ ಕೋರ್ಟ್ ಆದೇಶ
ಬೆಂಗಳೂರು, ಆ. 5– ಇಬ್ಬರು ಸಚಿವರು ಸೇರಿದಂತೆ 81 ಮಂದಿ ಶಾಸಕರು 1995– 96 ಮತ್ತು 96– 97ನೇ ಸಾಲಿನ ಆಸ್ತಿಪಾಸ್ತಿ ವಿವರ ಸಲ್ಲಿಸಿಲ್ಲ ಎಂದು ಲೋಕಾಯುಕ್ತ ಇಂದು ಹೈಕೋರ್ಟಿಗೆ ತಿಳಿಸಿತು.
ಈ ಸದಸ್ಯರ ಹೆಸರುಗಳನ್ನು ಆಗಸ್ಟ್ 9ರೊಳಗೆ ಕೋರ್ಟಿಗೆ ತಿಳಿಸಬೇಕೆಂದು ವಿಭಾಗೀಯ ನ್ಯಾಯಪೀಠ ಆದೇಶಿಸಿತು.
ಅದಾದ ನಂತರ ಅವರ ಮೇಲೆ ಕಾನೂನಿನಂತೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿತು.