ರಾಜೀವ್ ಹತ್ಯೆ: ವಿಶೇಷ ತನಿಖಾ ಸಂಸ್ಥೆ ರಚನೆ
ನವದೆಹಲಿ, ಜುಲೈ 31 (ಪಿಟಿಐ)– ರಾಜೀವ್ ಗಾಂಧಿ ಹತ್ಯೆ ಕುರಿತಂತೆ ವಿಚಾರಣೆ ನಡೆಸಿದ ಜೈನ್ ಆಯೋಗದ ಅಂತಿಮ ವರದಿಯ ಶಿಫಾರಸಿನಂತೆ, ರಾಜೀವ್ ಹತ್ಯೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿ, ವಿವಾದಾತ್ಮಕ ಸಾಧು ಚಂದ್ರಸ್ವಾಮಿ ಮತ್ತು ಜನತಾ ಪಕ್ಷದ ಅಧ್ಯಕ್ಷ ಡಾ. ಸುಬ್ರಮಣಿಯನ್ ಸ್ವಾಮಿ ಅವರ ಪಾತ್ರದ ಕುರಿತಂತೆ ತನಿಖೆ ನಡೆಸಲು ಕೇಂದ್ರ ಸರ್ಕಾರವು ವಿಶೇಷ ತನಿಖಾ ಸಂಸ್ಥೆಯನ್ನು ರಚಿಸಿದೆ. ಜೈನ್ ಆಯೋಗದ ಅಂತಿಮ ವರದಿ ಮತ್ತು ಅದರ ಆಧಾರದಲ್ಲಿ ಕೈಗೊಳ್ಳಲಾದ ಕ್ರಮದ ವರದಿಯನ್ನು ಕೇಂದ್ರ ಗೃಹ ಸಚಿವ ಎಲ್.ಕೆ.ಅಡ್ವಾಣಿ ಅವರು ಸಂಸತ್ತಿನಲ್ಲಿ ಇಂದು ಮಂಡಿಸಿದರು.
ಜೈನ್ ಆಯೋಗದ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದ್ದು, ಎಲ್ಲ ಆರೋಪಿಗಳ ಪಾತ್ರ ಕುರಿತಂತೆ ತನಿಖೆ ನಡೆಸಲು ‘ಎಲ್ಲ ತನಿಖಾ ವಿಭಾಗಗಳನ್ನೊಳಗೊಂಡ ತನಿಖಾ ಸಂಸ್ಥೆಯೊಂದನ್ನು (ಎಂಡಿಎಂಎ) ರಚಿಸಲಾಗುವುದು’ ಎಂದು ಕ್ರಮ ಕೈಗೊಂಡ ವರದಿಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.