ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಭಾನುವಾರ 3.8.1997

Last Updated 2 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ಭಾಷಣಕ್ಕೆ ಅಡ್ಡಿ, ಘೋಷಣೆಪ್ರಧಾನಿ ಸಭಾತ್ಯಾಗ

ನವದೆಹಲಿ, ಆ. 2– ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಮತ್ತು ಲಾಲೂ ಪ್ರಸಾದ್ ಯಾದವ್ ನೇತೃತ್ವದಲ್ಲಿ ಜನತಾ ದಳದ ಮೂವರು ಸಚಿವರನ್ನು ಕೇಂದ್ರ ಸಂಪುಟದಿಂದ ಕೈ ಬಿಡಬೇಕೆಂದು ಕೂಗಾಡಿದ ಬಿಹಾರದ ಕೆಲವರ ವರ್ತನೆಗೆ ಬೇಸತ್ತು ಪ್ರಧಾನಿ ಐ.ಕೆ. ಗುಜ್ರಾಲ್ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ಸಭಾತ್ಯಾಗ ಮಾಡಿದ ಘಟನೆ ಇಂದು ಆರಂಭವಾದ ಜನತಾದಳದ ರಾಷ್ಟ್ರೀಯ ಮಂಡಳಿ ಮತ್ತು ಪ್ರತಿನಿಧಿಗಳ ಸಮಾವೇಶದಲ್ಲಿ ನಡೆಯಿತು.

ಪ್ರಧಾನಿ ಅವರು ಮಾತು ನಿಲ್ಲಿಸಿ ವೇದಿಕೆ ಯಲ್ಲಿದ್ದ ಯಾರನ್ನೂ ಮಾತನಾಡಿಸದೇ ಹೊರಟದ್ದು ಆಶ್ಚರ್ಯವುಂಟು ಮಾಡಿತು. ಇದರಿಂದ ಇಡೀ ಸಭೆ ಕಕ್ಕಾಬಿಕ್ಕಿಯಾಯಿತು.

ಪ್ರಧಾನಿ ಅವರ ಭಾಷಣ ಹಿಡಿಸದಿದ್ದ ಬಹುತೇಕವಾಗಿ ಬಿಹಾರದ ಮಂದಿ, ಪ್ರಾಮಾ ಣಿಕತೆ, ನೀತಿ ಮತ್ತು ಮೌಲ್ಯಗಳ ಬಗೆಗೆ ಮಾತ ನಾಡುವ ನೀವು ದಳವನ್ನು ಒಡೆದ ಹೋದ ಲಾಲೂ ಅವರ ಪಕ್ಷದ ಮೂವರು ಸಚಿವರನ್ನು ಸಂಯುಕ್ತರಂಗದ ಸರ್ಕಾರದಲ್ಲಿ ಏಕೆ ಇಟ್ಟುಕೊಂಡಿದ್ದೀರಿ. ಅವರನ್ನು ಮೊದಲು ಕೈಬಿಡಿ ಎಂಬ ಘೋಷಣೆ ಕೂಗಿದಾಗ, ಕಸಿವಿಸಿಗೊಂಡವರಂತೆ ಕಂಡುಬಂದ ಗುಜ್ರಾಲ್ ಅವರು ತಮ್ಮ ಭಾಷಣವನ್ನು ನಿಲ್ಲಿಸಿ ಹೊರಟೇಬಿಟ್ಟರು.

ದಳಕ್ಕೆ ಒಳಗಿನ ವೈರಿಗಳದ್ದೇಸಮಸ್ಯೆ: ಪಟೇಲ್

ನವದೆಹಲಿ, ಆ. 2– ಜನತಾದಳಕ್ಕೆ ಹೊರಗಿ ನಿಂದ ವೈರಿಗಳಿಲ್ಲ. ವೈರಿಗಳಿರುವುದು ಒಳಗಿ ನಿಂದಲೇ. ಈ ವೈರಿಗಳು ಕುಟುಂಬ ದಲ್ಲಿಯೇ ಇದ್ದಾರೆ. ನಮಗೆ ತೊಂದರೆ ಉಂಟು ಮಾಡಲು ನಮ್ಮೊಳಗೇ ಕೆಲವರು ಕೆಲಸ ಮಾಡುತ್ತಿರುತ್ತಾರೆ ಎಂದು ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಜನತಾದಳದೊಳಗಿನ ಕುತಂತ್ರ ನೀತಿಯನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT