ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಸೋಮವಾರ, 4.8.1997

Last Updated 3 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

ಲಾಲೂ ಪಕ್ಷ ವಿಲೀನಕ್ಕೆದಳ ಸಮಾವೇಶ ಕರೆ

ನವದೆಹಲಿ, ಆ. 3– ತಾತ್ವಿಕ ಭಿನ್ನಾಭಿಪ್ರಾಯ ಇಲ್ಲದೆ ಕೇವಲ ವ್ಯಕ್ತಿ ನಿಷ್ಠೆಗಾಗಿ ಪಕ್ಷವನ್ನು ತೊರೆದಿರುವ ರಾಷ್ಟ್ರೀಯ ಜನತಾದಳದ ಸಂಸತ್ ಸದಸ್ಯರು, ಶಾಸಕರು ಮತ್ತು ಕಾರ್ಯಕರ್ತರಿಗೆ ಮತ್ತೆ ದಳಕ್ಕೆ ವಾಪಸ್ ಬರಲು ಮುಕ್ತ ಆಮಂತ್ರಣ ಮತ್ತು ದಳವನ್ನು ಒಂಬತ್ತು ವರ್ಷಗಳ ಹಿಂದೆ ಸ್ಥಾಪಿಸಿದ ದಿನಗಳಲ್ಲಿದ್ದ ಉತ್ಸಾಹವನ್ನು ತುಂಬುವ ಮೂಲಕ ದಳವನ್ನು ಪುನಶ್ಚೇತನಗೊಳಿಸಲು ಎರಡು ದಿನಗಳ ಕಾಲ ನಡೆದ ಜನತಾದಳದ ರಾಷ್ಟ್ರೀಯ ಮಂಡಳಿ ಮತ್ತು ಪ್ರತಿನಿಧಿಗಳ ಸಮಾವೇಶ ಇಂದು ನಿರ್ಣಯ ಮಾಡಿತು.

ಕೋಮುವಾದದ ವಿರುದ್ಧ ಹೋರಾಡಲು ಮತ್ತೆ ಮಾತೃಪಕ್ಷಕ್ಕೆ ಮರಳುವ ಬಗೆಗೆ ಪುನರ್‌ ಪರಿಶೀಲನೆ ಮಾಡಬೇಕು ಎಂದು ನಿರ್ಣಯದ ಮೂಲಕ ಆರ್‌ಜೆಡಿಯ ಪ್ರತಿನಿಧಿಗಳುಮತ್ತು ಕಾರ್ಯಕರ್ತರಿಗೆ ಮನವಿ ಮಾಡುವ ನಿರ್ಧಾರವನ್ನು ಸಮಾವೇಶವುಅಂಗೀಕರಿಸಿತು.

ಶರದ್ ಯಾದವ್ ರಾಜೀನಾಮೆಗೆಎಡಪಕ್ಷಗಳ ಆಗ್ರಹ

ನವದೆಹಲಿ, ಆ. 3 (ಪಿಟಿಐ)– ಹವಾಲ ಹಗರಣದಲ್ಲಿ ವಿಚಾರಣಾ ನ್ಯಾಯಾಲಯವು ಆರೋಪ ಹೊರಿಸಲು ತೀರ್ಮಾಸಿರುವ ಕಾರಣ ಜನತಾದಳದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಎಡಪಕ್ಷಗಳು ಒತ್ತಾಯಿಸುವ ಮೂಲಕ ಶರದ್ ಯಾದವ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ನ್ಯಾಯಾಲಯದ ನಿರ್ಧಾರದ ಹಿನ್ನೆಲೆ ಯಲ್ಲಿ ಪಕ್ಷದ ಅಧ್ಯಕ್ಷತೆಯನ್ನು ವಹಿಸಿಕೊಡಲು ತಾತ್ಕಾಲಿಕ ವ್ಯವಸ್ಥೆ ಮಾಡಬೇಕು ಎಂದು ಸಿಪಿಎಂ ಇಂದು ಬಿಡುಗಡೆ ಮಾಡಿದ ಸಿಪಿಎಂ ಪಾಲಿಟ್ ಬ್ಯೂರೊ ಹೇಳಿಕೆಯಲ್ಲಿ ಆಗ್ರಹಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT