ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಶನಿವಾರ 14 ಜೂನ್ 1997

Last Updated 13 ಜೂನ್ 2022, 20:05 IST
ಅಕ್ಷರ ಗಾತ್ರ

ದೆಹಲಿ: ಚಿತ್ರ ಮಂದಿರದಲ್ಲಿ ಬೆಂಕಿ–60 ಸಾವು

ನವದೆಹಲಿ, ಜೂನ್‌ 13 (ಯುಎನ್‌ಐ, ಪಿಟಿಐ)– ದಕ್ಷಿಣ ದೆಹಲಿಯ ಚಿತ್ರಮಂದಿರವೊಂದರಲ್ಲಿ ಇಂದು ಸಂಜೆ ಸಂಭವಿಸಿದ ಭೀಕರ ಬೆಂಕಿ ಆಕಸ್ಮಿಕದಲ್ಲಿ 60 ಮಂದಿ ಪ್ರೇಕ್ಷಕರು ಸತ್ತಿದ್ದಾರೆ ಹಾಗೂ ಇತರ 200 ಮಂದಿ ಗಾಯಗೊಂಡಿದ್ದಾರೆ.

ನೂತನವಾಗಿ ಬಿಡುಗಡೆಯಾಗಿರುವ ‘ಬಾರ್ಡರ್‌’ ಹಿಂದಿ ಚಿತ್ರದ ಪ್ರದರ್ಶನ ‘ಉಪಹಾರ್‌’ ಚಿತ್ರ ಮಂದಿರದಲ್ಲಿ ನಡೆದಿತ್ತು. ಚಿತ್ರ ಮಂದಿರದಲ್ಲಿ 1,400 ಜನ ಕುಳಿತುಕೊಳ್ಳಬಹುದಾಗಿದ್ದು, ದುರ್ಘಟನೆ ಸಂಭವಿಸಿದ್ದಾಗ ಚಿತ್ರಮಂದಿರ ತುಂಬಿತ್ತು.

ಇಂದು ಸಂಜೆ 5.10ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯನ್ನು ಆರಿಸಲು 200 ಮಂದಿ ಅಗ್ನಿಶಾಮಕ ಸಿಬ್ಬಂದಿ ಮತ್ತು 48 ಅಗ್ನಿಶಾಮಕ ವಾಹನಗಳು ಸುಮಾರು ಎರಡು ತಾಸುಗಳು ಶ್ರಮಿಸಿದವು.

ಚಿತ್ರಮಂದಿರದ ನೆಲಮಾಳಿಗೆಯಲ್ಲಿ ಇಟ್ಟಿದ್ದ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂದಿದ್ದರಿಂದ ಬೆಂಕಿ ಹತ್ತಿಕೊಂಡಿತು. ಟ್ರಾನ್ಸ್‌ಫಾರ್ಮರ್‌ನಲ್ಲಿದ್ದ ತೈಲದಿಂದಾಗಿ ಬೆಂಕಿ ಶೀಘ್ರವೇ ವ್ಯಾಪಿಸುವಂತಾಯಿತು ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಮ್ಯಾಕ್ಸ್‌ವೆಲ್‌ ಪೆರಿರಾ ಅವರು ತಿಳಿಸಿದ್ದಾರೆ.

ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡಿದ್ದರಿಂದ ಚಿತ್ರಮಂದಿರ ಒಳಗೆ ಹೊಗೆ ವ್ಯಾಪಿಸಿತು. ಹೊಗೆಯ ಕಾರಣ ಗೊತ್ತಾಗುವಷ್ಟರಲ್ಲೇ ಬೆಂಕಿ ಚಿತ್ರಮಂದಿರವನ್ನು ವ್ಯಾಪಿಸಿತು. ಸತ್ತವರಲ್ಲಿ ಬಹುತೇಕ ಜನ ಉಸಿರು ಕಟ್ಟಿ ಮತ್ತು ಕಾಲ್ತುಳಿತಕ್ಕೆ ಸಿಕ್ಕಿ ಸತ್ತಿರಬಹುದು ಎಂದು ಶಂಕಿಸಲಾಗಿದೆ.

ಬೆಂಕಿ ವ್ಯಾಪಿಸುತ್ತಿರುವುದು ತಿಳಿದ ತಕ್ಷಣ ಚಿತ್ರಮಂದಿರದ ಬಾಗಿಲುಗಳನ್ನು ತೆರೆದಿದ್ದರಿಂದ ಇನ್ನಷ್ಟು ಅನಾಹುತ ಸಂಭವಿಸುವುದು ತಪ್ಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT