25 ವರ್ಷಗಳ ಹಿಂದೆ: ಸೋಮವಾರ, 4–12–1995

ಒತ್ತಡಕ್ಕೆ ಮಣಿದ ಸಂಸ್ಕೃತಿ ಸಚಿವೆ ರಾಜೀನಾಮೆ
ಬೆಂಗಳೂರು, ಡಿ. 3– ಅಂಬೇಡ್ಕರ್ ಪ್ರತಿಮೆಗೆ ‘ಮದ್ಯಾಭಿಷೇಕ’ ಪ್ರಕರಣದ ಹಿನ್ನೆಲೆಯಲ್ಲಿ ರಾಜೀನಾಮೆಗೆ ಆಗ್ರಹಿಸಿ ದಲಿತ ಸಂಘಟನೆಗಳು ರಾಜ್ಯದಾದ್ಯಂತ ನಡೆಸುತ್ತಿರುವ ಚಳವಳಿಯ ಒತ್ತಡಕ್ಕೆ ಮಣಿದು, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಅವರು ಇಂದು ತಮ್ಮ ಸ್ಥಾನಕ್ಕೆ ಸ್ವಯಿಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ.
ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿಯವರು ದಲಿತ ಸಂಘಟನೆಗಳ ಜೊತೆ ನಡೆಸಿದ ಸಭೆಯಲ್ಲಿಯೂ ಸಚಿವೆ ರಾಜೀನಾಮೆ ನೀಡಬೇಕೆಂಬ ಬಗ್ಗೆ ಒಕ್ಕೊರಲಿನ ಅಭಿಪ್ರಾಯ ಮೂಡಿಬಂದಿತ್ತು.
ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ನ. 13ರಂದು ‘ಮದ್ಯಾಭಿಷೇಕ’ ಮಾಡಿದ ಪ್ರಕರಣದಲ್ಲಿ ಲಲಿತಾ ನಾಯಕ್ ಅವರ ಪುತ್ರ ವಿಶ್ವಜಿತ್ ನಾಯಕ್ ಕೂಡ ಆರೋಪಿ ಎಂಬ ಮಾತು ಕೇಳಿಬಂದಿತ್ತು. ಇದೇ ಈ ಎಲ್ಲ ಬೆಳವಣಿಗೆಗಳಿಗೆ ಕಾರಣ.
ಕೆಜಿಎಫ್ ಚಿನ್ನದ ಗಣಿ ಪುನರಾರಂಭಕ್ಕೆ ಯತ್ನ
ವಿಜಯವಾಡ, ಡಿ. 3 (ಯುಎನ್‌ಐ)– ಕರ್ನಾಟಕದ ಕೆಜಿಎಫ್‌ನಲ್ಲಿರುವ ಚಿನ್ನದ ಗಣಿಯಲ್ಲಿ ಗಣಿಗಾರಿಕೆ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಕೇಂದ್ರದ ಗಣಿ ರಾಜ್ಯ ಸಚಿವ ಗಿರಿಧರ ಗೊಮಾಂಗೊ ಇಂದು ಇಲ್ಲಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.