ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಗುರುವಾರ, 7–12–1995

Last Updated 6 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಪೆಟ್ರೋಲ್‌ ಬಂಕ್‌ ಅಕ್ರಮ ಲೈಸೆನ್ಸ್‌ ಪ್ರತಿಷ್ಠಿತರ ಬಂಧುಗಳಿಗೆ ನೋಟಿಸ್‌

ನವದೆಹಲಿ, ಡಿ. 6 (ಪಿಟಿಐ)– ಕೇಂದ್ರ ಸರ್ಕಾರದ ವಿವೇಚನಾ ಕೋಟಾದಲ್ಲಿ ಅಡುಗೆ ಅನಿಲ ಹಂಚಿಕೆ ಹಾಗೂ ಪೆಟ್ರೋಲ್‌ ಬಂಕ್‌ ಏಜೆನ್ಸಿ ಮಂಜೂರಾತಿ ‍ಪಡೆದಿರುವ ಸಚಿವರು, ಸಂಸತ್‌ ಸದಸ್ಯರು ಹಾಗೂ ಪ್ರತಿಷ್ಠಿತರ ಬಂಧುಗಳಿಗೆ ಪತ್ರಿಕಾ ವರದಿಯೊಂದನ್ನೇ ದೂರೆಂದು ಪರಿಗಣಿಸಿ ಸುಪ್ರೀಂ ಕೋರ್ಟ್‌ ಸ್ವಯಂ ಇಂದು ನೋಟಿಸು ಜಾರಿ ಮಾಡಿದೆ.

ಕೇಂದ್ರ ಆಹಾರ ಸಚಿವ ಬೂಟಾಸಿಂಗ್‌ ಅವರ ಪುತ್ರ, ವಿವಿಧ ರಾಜಕಾರಣಿ, ಅಧಿಕಾರಿಗಳು, ಕೇಂದ್ರ ಮತ್ತು ರಾಜ್ಯಗಳ ತೈಲ ಆಯ್ಕೆ ಮಂಡಲಿಗಳ ಅಧ್ಯಕ್ಷರು ಹಾಗೂ ಸದಸ್ಯರ ರಕ್ತಸಂಬಂಧಿಗಳಿಗೆ ಪೆಟ್ರೋಲಿಯಂ ಖಾತೆ ಸಚಿವ ಕ್ಯಾಪ್ಟನ್‌ ಸತೀಶ್‌ ಶರ್ಮಾ ಅವರು ತಮ್ಮ ವಿವೇಚನೆ ಕೋಟಾ ಮೂಲಕ ಅಡುಗೆ ಅನಿಲ ಮತ್ತು ಪೆಟ್ರೋಲ್‌ ವಿತರಣೆ ಹಕ್ಕು ನೀಡಿದ್ದಾರೆ ಎಂದು ವರದಿಯಲ್ಲಿ ಪ್ರಸ್ತಾ‍ಪವಾಗಿತ್ತು.

ಪಾಲಿಕೆ ಚುನಾವಣೆ: ತರಾತುರಿ ಸೂಚನೆ

ಬೆಂಗಳೂರು, ಡಿ. 6– ಬೆಂಗಳೂರು ಮಹಾನಗರಪಾಲಿಕೆ ಸೇರಿದಂತೆ ಅನೇಕ ನಗರಸಭೆ ಮತ್ತು ಪುರಸಭೆಗಳ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮೀಸಲಾತಿ ವಿವರಗಳ ಅಧಿಸೂಚನೆ ಹೊರಡದೆ ಆತಂಕಗೊಂಡಿದ್ದ ರಾಜ್ಯ ಚುನಾವಣಾ ಆಯೋಗದ ಒತ್ತಡದ ಮೇರೆಗೆ ಸರ್ಕಾರ ತರಾತುರಿಯಿಂದ ಅಧಿಸೂಚನೆ ಹೊರಡಿಸುವ ಕಾರ್ಯದಲ್ಲಿ ತೊಡಗಿದೆ.

ಸುಪ್ರೀಂ ಕೋರ್ಟ್‌ ಮುಂದೆ ಸರ್ಕಾರ ಒಪ್ಪಿಕೊಂಡಿರುವಂತೆ, ಜ. 7ರಂದು ಈ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಈ ತಿಂಗಳ 15ರಿಂದಲೇ ವೇಳಾಪಟ್ಟಿಆರಂಭವಾಗಬೇಕಿದೆ. ಆದರೆ ಶೇ 25 ಭಾಗದಷ್ಟು ಸಂಸ್ಥೆಗಳಿಗೆ ಸಂಬಂಧಿಸಿ ಅಧಿಸೂಚನೆಯೇ ಹೊರಡದಿದ್ದುದರಿಂದ ಆಯೋಗಕ್ಕೆ ದಿಕ್ಕು ತೋಚದಂತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT