ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಬುಧವಾರ, 8-5-1996

Last Updated 7 ಮೇ 2021, 19:30 IST
ಅಕ್ಷರ ಗಾತ್ರ

ಕರುಣಾಕರನ್‌ ಹೇಳಿಕೆ ಖಂಡನೆಗೆ ಮೌಖಿಕ ಆದೇಶ

ಬೆಂಗಳೂರು, ಮೇ 7– ಚುನಾವಣೆಯ ಬಳಿಕ ಕಾಂಗೈ ನಾಯಕತ್ವದಲ್ಲಿ ಬದಲಾವಣೆ ಆಗಬೇಕು ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಪಿ.ವಿ.ನರಸಿಂಹ ರಾವ್‌ ಅವರಿಗೆ ಸವಾಲನ್ನು ಒಡ್ಡಿರುವ ಕೇಂದ್ರ ಸಚಿವ ಕೆ.ಕರುಣಾಕರನ್‌ ಹೇಳಿಕೆಯು ದೇಶದ ಉದ್ದಗಲಕ್ಕೆ ಕಾಂಗೈ ಪಾಳಯದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ.

ಫಲಿತಾಂಶವನ್ನು ಸ್ವೀಕರಿಸಲು ದೇಶ ಸಜ್ಜಾಗಿರುವಾಗಲೇ ಬಂದಪ್ಪಳಿಸಿದ ಕರುಣಾಕರನ್‌ ಹೇಳಿಕೆಯನ್ನು ಎಲ್ಲಾ ಕಾಂಗೈ ಮುಖಂಡರೂ ಖಂಡಿಸಿ ಹೇಳಿಕೆ ನೀಡಬೇಕು ಎಂದು ಪಕ್ಷದ ಹೈಕಮಾಂಡ್‌ ನೀಡಿರುವ ಮೌಖಿಕ ಆದೇಶ ಗಮನಿಸಿದರೆ, ಹೈಕಮಾಂಡ್‌ ಕೂಡಾ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದೇ ಅರ್ಥ ಎಂದು ಹಿರಿಯ ಕಾಂಗೈ ಮುಖಂಡರೊಬ್ಬರು ಇಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮತ ಎಣಿಕೆ ಇಂದು ಆರಂಭ

ಬೆಂಗಳೂರು, ಮೇ 7– ರಾಜ್ಯದ 27 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಪ್ರಾರಂಭ ಆಗಲಿರುವ ಮತಗಳ ಎಣಿಕೆ ಕಾರ್ಯಕ್ಕೆ ಚುನಾವಣಾ ಆಯೋಗ ಎಲ್ಲ ತಯಾರಿ ನಡೆಸಿದೆ.

ಗುರುವಾರ ಬೆಳಿಗ್ಗೆ 9ರ ವೇಳೆಗೆ ಬಹುತೇಕ ಎಲ್ಲ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT