ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಬುಧವಾರ 23.10.1996

Last Updated 22 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಕಣ್ಮನ ಸೆಳೆದ ಜಂಬೂ ಸವಾರಿ

ಮೈಸೂರು, ಅ. 22– ಹತ್ತು ದಿನಗಳ ಮೈಸೂರು ದಸರಾದ ಶೃಂಗ ಕಾರ್ಯಕ್ರಮವಾದ ವಿಶ್ವವಿಖ್ಯಾತ ಜಂಬೂ ಸವಾರಿ ಇಂದು ಅತ್ಯಂತ ಆಕರ್ಷಕವಾಗಿ ನಡೆದು ಲಕ್ಷಾಂತರ ಜನರ ಮನಸ್ಸನ್ನು ಸೂರೆಗೊಂಡಿತು.

ಎಂಟನೂರು ಐವತ್ತು ಕೆ.ಜಿ. ಚಿನ್ನದ ಅಂಬಾರಿಯಲ್ಲಿ ಶೃಂಗಾರಗೊಂಡಿದ್ದ ಚಾಮುಂಡೇಶ್ವರಿಯನ್ನು ಹೊತ್ತ 60 ವರ್ಷದ ವೃದ್ಧ ದ್ರೋಣ ಗಾಂಭೀರ್ಯದಿಂದ ಅರಮನೆಯ ಆವರಣದಲ್ಲಿ ಹೆಜ್ಜೆ ಹಾಕುತ್ತಿದ್ದಂತೆ ಪರಂಪರಾಗತ ಹಬ್ಬವಾದ ದಸರಾದ ಕೊನೆಯ ಅಂಕ ಮುಗಿಯಿತು.

ಮಳೆ ಮೋಡಗಳ ಕಣ್ಣುಮುಚ್ಚಾಲೆಯಲ್ಲಿ ಸೃಷ್ಟಿಯಾದ ಆತಂಕದ ನಡುವೆಯೇ ಈ ಬಾರಿಯ ದಸರಾ ಸಾಗಿತು. ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನೇ ಹೊತ್ತು ತಂದ ಪ್ರತೀ ಜಿಲ್ಲೆಯ ತಂಡಗಳ ಕಲಾಭಿವ್ಯಕ್ತಿಯ ನಡುವೆ ಜಂಬೂ ಸವಾರಿಯ ವೈಭವ ಸಾಗಿತು.

ಭಾರತಕ್ಕೆ ಜಯ ತಂದು ಕೊಟ್ಟ ಶ್ರೀನಾಥ್, ಕುಂಬ್ಳೆ

ಬೆಂಗಳೂರು, ಅ. 22– ಭಾರತ ತಂಡದವರು ಟೈಟನ್ ಕಪ್ ತ್ರಿಕೋನ ಸರಣಿ ಕ್ರಿಕೆಟ್ ಪಂದ್ಯ ದಲ್ಲಿ ಆಸ್ಟ್ರೇಲಿಯಾದ ಎದುರು 2 ವಿಕೆಟ್‌ಗಳ ಜಯ ಗಳಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡದವರು 50 ಓವರ್‌ಗಳಲ್ಲಿ ಏಳು ವಿಕೆಟ್‌ಗಳನ್ನು ಕಳೆದು ಕೊಂಡು 215 ರನ್ ಗಳಿಸಿದರೆ, ನಂತರ ಬ್ಯಾಟಿಂಗ್‌ಗೆ ಇಳಿದ ಭಾರತದವರು 48.5 ಓವರುಗಳಲ್ಲಿ ಎಂಟು ವಿಕೆಟ್‌ಗಳನ್ನು ಕಳೆದು ಕೊಂಡು 216 ರನ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT