ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಡಿಎಂಕೆ ಸಚಿವರನ್ನು ಕೈಬಿಡಿ: ಪ್ರಧಾನಿಗೆ ಕಾಂಗ್ರೆಸ್‌ ಪತ್ರ

Last Updated 20 ನವೆಂಬರ್ 2022, 19:30 IST
ಅಕ್ಷರ ಗಾತ್ರ

l→ಡಿಎಂಕೆ ಸಚಿವರನ್ನು ಕೈಬಿಡಿ: ಪ್ರಧಾನಿಗೆ ಕಾಂಗ್ರೆಸ್‌ ಪತ್ರ

ನವದೆಹಲಿ, ನವೆಂಬರ್‌ 20– ಜೈನ್ ಆಯೋಗದ ವರದಿಯನ್ನು ಸಂಸತ್‌ನಲ್ಲಿ ಮಂಡಿಸಿದ ಹಿನ್ನೆಲೆಯಲ್ಲಿ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆಯ ಸಂಚಿನಲ್ಲಿ ದೋಷಾರೋಪಕ್ಕೆ ಒಳಗಾಗಿರುವ ಡಿಎಂಕೆಯ ವಿರುದ್ಧ ಕ್ರಮದ ಮೊದಲ ಹೆಜ್ಜೆಯಾಗಿ ಆ ಪಕ್ಷದ ಸಚಿವರನ್ನು ತಕ್ಷಣವೇ ಕೈ ಬಿಡಬೇಕು, ಇಲ್ಲವಾದರೆ ಬೆಂಬಲ ಮುಂದುವರಿಸುವುದು ಕಷ್ಟ ಎಂದು ಪ್ರಧಾನಿಯವರಿಗೆ ಕಾಂಗ್ರೆಸ್‌ ಪಕ್ಷ ಇಂದು ರಾತ್ರಿ ಸ್ಪಷ್ಟಪಡಿಸಿದೆ.

ಕಾಂಗ್ರೆಸ್‌ ಕಾರ್ಯಕಾರಿಣಿಯು ಇಂದು ರಾತ್ರಿ ತಮಗೆ ನೀಡಿದ ಅಧಿಕಾರದ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯೋನ್ಮುಖರಾದ ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿ ಅವರು ಪ್ರಧಾನಿ ಗುಜ್ರಾಲ್‌ ಅವರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್‌ ಪಕ್ಷದ ಈ ನಿರ್ಧಾರದಿಂದಾಗಿ ಗುಜ್ರಾಲ್‌ ನೇತೃತ್ವದ ಸಂಯುಕ್ತ ರಂಗ ಸರ್ಕಾರದ ಭವಿಷ್ಯ ಡೋಲಾಯಮಾನವಾಗಿದೆ.

l→ವಿ.ಪಿ. ಸಿಂಗ್‌ ವಿರುದ್ಧ ಆರೋಪಕ್ಕೆ ಸರ್ಕಾರದ ತಿರಸ್ಕಾರ

ನವದೆಹಲಿ, ನವೆಂಬರ್‌ 20– ರಾಜೀವ್‌ ಗಾಂಧಿ ಅವರಿಗೆ ನೀಡಲಾಗಿದ್ದ ವಿಶೇಷ ಭದ್ರತಾ ವ್ಯವಸ್ಥೆಯನ್ನು ವಿ.ಪಿ. ಸಿಂಗ್‌ ಸರ್ಕಾರವು ದುರುದ್ದೇಶಪೂರಿತವಾಗಿ ಹಿಂತೆಗೆದುಕೊಂಡಿತು ಎಂಬ ಜೈನ್‌ ಆಯೋಗದ ತೀರ್ಮಾನದ ಬಗ್ಗೆ ಸರ್ಕಾರದ ಸಹಮತವಿಲ್ಲದ ಕಾರಣ, ಸಂಸತ್ತಿನಲ್ಲಿಮಂಡಿಸಲಾದ ಕ್ರಮ ಕೈಗೊಂಡ ವರದಿಯಲ್ಲಿ (ಎಟಿಆರ್‌) ಅದನ್ನು ತಿರಸ್ಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT