ಬುಧವಾರ, ಸೆಪ್ಟೆಂಬರ್ 22, 2021
23 °C
25 ವರ್ಷಗಳ ಹಿಂದೆ ಗುರುವಾರ 25.7.1996

ಪ್ರಜಾವಾಣಿ 25 ವರ್ಷಗಳ ಹಿಂದೆ| ಗುರುವಾರ 25.7.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ ನೀರು ಬಿಡುಗಡೆ: ಕೇಂದ್ರ ಮಧ್ಯಸ್ಥಿಕೆಗೆ ತಮಿಳುನಾಡು ಅಗ್ರಹ

ಮದ್ರಾಸ್, ಜುಲೈ 24 (ಪಿಟಿಐ)– ತಮಿಳುನಾಡು ರೈತರ ಸಾಂಬಾ ಬೆಳೆಗೆ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿ ಎಂ. ಕರುಣಾನಿಧಿ ಇಂದು ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದರು.

ತಮಿಳು ಮಾನಿಲ ಕಾಂಗ್ರೆಸ್‌ನ ಸಿ. ಜ್ಞಾನಶೇಖರನ್ ಮತ್ತು ದೇವೇಂದ್ರ ಕುಲವೆಳ್ಳಾಳರ್ ಸಮಾಜಂನ ಡಾ.ಕೆ. ಕೃಷ್ಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಕಾವೇರಿ ನೀರಾವರಿ ಪ್ರದೇಶದ ರೈತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕರ್ನಾಟಕ ನೀರು ಬಿಡುಗಡೆ ಮಾಡಬೇಕು. ಈ ವಿವಾದವನ್ನು ಎರಡು ರಾಷ್ಟ್ರಗಳ ಸಮಸ್ಯೆ ಎಂದು ಪರಿಗಣಿಸದೆ ಭಾರತದ ಎರಡು ರಾಜ್ಯಗಳ ಸಮಸ್ಯೆ ಎಂದು ಪರಿಗಣಿಸಬೇಕು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು