ಶುಕ್ರವಾರ, ಅಕ್ಟೋಬರ್ 22, 2021
30 °C

25 ವರ್ಷಗಳ ಹಿಂದೆ: ಬುಧವಾರ, 09-10-1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೂರಿಯ ಹಗರಣ: ಸ್ವಿಸ್ ಖಾತೆಯಲ್ಲಿ 27 ಕೋಟಿ ಪತ್ತೆ

ನವದೆಹಲಿ, ಅ. 8 (ಯುಎನ್‌ಐ)– ಪ್ರಮುಖ ಬೆಳವಣಿಗೆಯೊಂದರಲ್ಲಿ 133 ಕೋಟಿ ರೂಪಾಯಿಯ ಯೂರಿಯ ಹಗರಣಕ್ಕೆ ಸಂಬಂಧಪಟ್ಟ 27 ಕೋಟಿ ರೂಪಾಯಿ ಹಣವನ್ನು ತುರ್ಕಿ ದೇಶದ ಕರ್ಸನ್ ಸಂಸ್ಥೆಯ ಇಬ್ಬರು ಅಧಿಕಾರಿಗಳ ಸ್ವಿಸ್ ಬ್ಯಾಂಕ್ ಖಾತೆಯಲ್ಲಿ ಸಿಬಿಐ ಪತ್ತೆ ಮಾಡಿದೆ.

ಕಿಕ್ಕಿರದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ ಸಿಬಿಐಯ ನಿರ್ದೇಶಕ ಜೋಗಿಂದರ್ ಸಿಂಗ್ ಅವರು ಈ ಹಣವನ್ನು ಮರಳಿಸುವಂತೆ ಸ್ವಿಸ್ ಅಧಿಕಾರಿಗಳಿಗೆ ಔಪಚಾರಿಕ ಕೋರಿಕೆ ಸಲ್ಲಿಸಲಾಗಿದೆ. ನವೆಂಬರ್ ಅಂತ್ಯದಲ್ಲಿ ಈ ಹಣ ಬಿಡುಗಡೆಯಾಗುವುದನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಅತಿವೃಷ್ಟಿ: 50 ಕೋಟಿ ಪರಿಹಾರಕ್ಕೆ ಮನವಿ

ಮೈಸೂರು, ಅ. 8– ಅತಿವೃಷ್ಟಿಯಿಂದಾಗಿ ಕರ್ನಾಟಕದಲ್ಲಾಗಿರುವ ನಷ್ಟಕ್ಕೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರವನ್ನು ಐವತ್ತು ಕೋಟಿ ರೂ. ನೀಡುವಂತೆ ಕೋರಲಾಗಿದೆ ಎಂದು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಇಂದಿಲ್ಲಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು