ರಮೇಶ್, ಶಿಲ್ಪಾಗೆ ಅತ್ಯುತ್ತಮ ನಟ–ನಟಿ ಪ್ರಶಸ್ತಿ
ಮಡಿಕೇರಿ, ಫೆ. 27– ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ’ ಮತ್ತು ಟಿ.ಎಸ್.ನಾಗಾಭರಣ ನಿರ್ದೇಶನದ ‘ನಾಗಮಂಡಲ’ ಕನ್ನಡ ಚಿತ್ರಗಳು 1996–97ನೇ ಸಾಲಿನ ರಾಜ್ಯಮಟ್ಟದ ಮೊದಲ ಮತ್ತು ಎರಡನೇ ‘ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ’ಗೆ ಪಾತ್ರವಾಗಿವೆ.
‘ಅಮೆರಿಕಾ ಅಮೆರಿಕಾ’ ಚಿತ್ರದ ‘ಸೂರ್ಯ’ ಪಾತ್ರಧಾರಿ ರಮೇಶ್ ಮತ್ತು ‘ಜನುಮದ ಜೋಡಿ’ ಚಿತ್ರದ ‘ಕನಕ’ ಶಿಲ್ಪಾ ಈ ಸಾಲಿನ ಅತ್ಯುತ್ತಮ ನಟ– ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೊಜೆಂಟ್ರಿಕ್ಸ್: ಸಿಬಿಐ ತನಿಖೆಗೆ ಕೋರ್ಟ್ ಆದೇಶ
ಬೆಂಗಳೂರು, ಫೆ. 27– ಮಂಗಳೂರು ಬಳಿಯ ನಂದಿಕೂರ್‌ನಲ್ಲಿ 1000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಘಟಕವನ್ನು ಅಮೆರಿಕದ ಕೊಜೆಂಟ್ರಿಕ್ಸ್ ಕಂಪನಿಗೆ ಕಾಂಟ್ರಾಕ್ಟ್ ಕೊಟ್ಟಿರುವಲ್ಲಿ ಕಮಿಷನ್ ರೂಪದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಇರುವ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಹೈಕೋರ್ಟ್ ಇಂದು ಆದೇಶಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.