ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಶುಕ್ರವಾರ, 23-04-1996

Last Updated 22 ಏಪ್ರಿಲ್ 2021, 21:47 IST
ಅಕ್ಷರ ಗಾತ್ರ

ಭಟ್ಕಳ: ಮತದಾನದ ನಂತರ ಗುರುತಿನ ಚೀಟಿ ಕಡ್ಡಾಯ

ಕಾರವಾರ, ಏ. 22– ಭಟ್ಕಳದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಆದರೂ ಲೋಕಸಭಾ ಚುನಾವಣೆಯಲ್ಲಿ ಮುಕ್ತ ಮತ್ತು ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಳ್ಳಲು ಹಾಗೂ ಭಟ್ಕಳ ನಗರ, ಗ್ರಾಮೀಣ ಪ್ರದೇಶ ಮತ್ತು ಶಿರಸಿಯಲ್ಲಿ ಯಾವುದೇ ದುಷ್ಕೃತ್ಯ ತಡೆಗಟ್ಟಲು ಹಲವಾರು ಉಗ್ರ ಕ್ರಮ ತೆಗೆದುಕೊಳ್ಳ ಲಾಗಿದೆ. ಮತದಾನದ ನಂತರ ಭಟ್ಕಳ ಪ್ರವೇಶಿಸುವವರು ಮತ್ತು ಹೊರಹೋಗು
ವವರು ಕಡ್ಡಾಯವಾಗಿ ಗುರುತಿನ ಚೀಟಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ.

ಭಯದ ವಾತಾವರಣವಿಲ್ಲದೇ ಶಾಂತ ಮತದಾನಕ್ಕೆ ಅನುವಾಗಿಸಲು ಮತ್ತು ಸಮಾಜ ವಿರೋಧಿ ಶಕ್ತಿಗಳನ್ನು ನಿಯಂತ್ರಿಸಲು ಈ ಉಗ್ರ ಕ್ರಮ ಅನಿವಾರ್ಯವಾಗಿದೆ ಎಂದು ಜಿಲ್ಲಾ ಪೊಲೀಸ್‌ ಮುಖ್ಯಸ್ಥ ಡಾ. ಆರ್‌.ಪಿ.ಶರ್ಮಾ ತಿಳಿಸಿದರು.

ಆಯೋಗ ಹಸ್ತಕ್ಷೇಪ ಇಲ್ಲ

ನವದೆಹಲಿ, ಏ. 22 (ಪಿಟಿಐ)– ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯ ಕುರಿತು ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಚುನಾವಣಾ ಆಯೋಗ ತನ್ನ ಮೊದಲಿನ ನಿಲುವಿನಿಂದ ಹಿಂದೆ ಸರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT