ಬುಧವಾರ, ಜುಲೈ 6, 2022
22 °C

25 ವರ್ಷಗಳ ಹಿಂದೆ: ಶನಿವಾರ, ಮಾರ್ಚ್ 22, 1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಯಾವತಿ ಸರ್ಕಾರ ಇಂದು ಪ್ರಮಾಣವಚನ
ಲಖನೌ, ಮಾರ್ಚ್ 21 (ಪಿಟಿಐ)–
ಉತ್ತರಪ್ರದೇಶದಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ– ಬಿಜೆಪಿ ಪಕ್ಷಗಳ ಸಮ್ಮಿಶ್ರ ಸರ್ಕಾರದ ಐವರು ಸದಸ್ಯರ ಸಚಿವ ಸಂಪುಟ ಇಂದು ಪ್ರಮಾಣವಚನ ಸ್ವೀಕರಿಸುವ ಮೂಲಕ ಕಳೆದ ಐದು ತಿಂಗಳ ಅವಧಿಯ ರಾಷ್ಟ್ರಪತಿ ಆಳ್ವಿಕೆ ಕೊನೆಗೊಂಡಿತು.

ಆಲಮಟ್ಟಿ ಅಣೆ ನಿರ್ಮಾಣ ಕಾಮಗಾರಿ ನಿಲ್ಲದು
ಬೆಂಗಳೂರು, ಮಾರ್ಚ್ 21–
ಆಲಮಟ್ಟಿ ಅಣೆ ಕಟ್ಟೆ ನಿರ್ಮಾಣ ಕಾರ್ಯಕ್ಕೆ ಆಂಧ್ರಪ್ರದೇಶವಾಗಲೀ ಅಥವಾ ಯಾರೇ ಆಗಲಿ ಅಡಚಣೆ ಉಂಟು ಮಾಡುವುದನ್ನು ಸಹಿಸುವುದಿಲ್ಲ. ನಿಯೋಜಿಸಿರುವಂತೆ ಕೈಗೊಂಡಿರುವ ಅಣೆಕಟ್ಟಿನ ಕಾಮಗಾರಿಗಳನ್ನು ಯಾವುದೇ ಕಾರಣದಿಂದ ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸುವ ನಿರ್ಣಯವನ್ನು ಇಂದು ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಮಂಡಿಸಿದ ನಿರ್ಣಯಕ್ಕೆ ಪಕ್ಷಬೇಧವಿಲ್ಲದೆ ಎಲ್ಲರ ಒಪ್ಪಿಗೆ ದೊರೆಯಿತು.

ಸುಪ್ರೀಂ ಕೋರ್ಟಿಗೆ ಆಂಧ್ರದ ಮೊರೆ
ಹೈದರಾಬಾದ್, ಮಾರ್ಚ್ 21 (ಪಿಟಿಐ)
– ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳವನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶಿಸಬೇಕು ಎಂದು ಆಂಧ್ರಪ್ರದೇಶ ಸರ್ಕಾರ ಇಂದು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು