ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ 16.5.1997

Last Updated 15 ಮೇ 2022, 19:30 IST
ಅಕ್ಷರ ಗಾತ್ರ

ಪೆಟ್ರೋಲ್ ಬಂಕ್ ಪರವಾನಗಿ: 22ರಂದು ವರದಿ ಸಲ್ಲಿಸಲು ಆದೇಶ

ನವದೆಹಲಿ, ಮೇ 15 (ಯುಎನ್ಐ)– ಪೆಟ್ರೋಲ್ ಬಂಕ್‌ಗಳು ಹಾಗೂ ಅಡುಗೆ ಅನಿಲ ವಿತರಣಾ ಪರವಾನಗಿ ನೀಡುವಲ್ಲಿ ಸಂಸತ್ ಸದಸ್ಯರ ವಿವೇಚನಾ ಕೋಟಾವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪದ ಬಗ್ಗೆ ಈ ತಿಂಗಳ 22ರಂದು ವರದಿ ಸಲ್ಲಿಸುವಂತೆ ದೆಹಲಿ ಹೈಕೋರ್ಟ್‌ ಸಿಬಿಐಗೆ ಆದೇಶ ನೀಡಿದೆ.

ಆರೋಪದ ಕುರಿತು ತನಿಖೆ ನಡೆಸುತ್ತಿ ರುವ ಸಿಬಿಐ ಈ ಸಂಬಂಧ ಪೆಟ್ರೋಲಿಯಂ ಸಚಿವಾಲಯದಿಂದ 1996ರಲ್ಲಿ 15 ಮಂಜೂರಾತಿಗಳ ದಾಖಲೆ ಪತ್ರಗಳನ್ನು ಪಡೆದಿದ್ದು, ಈ ಎಲ್ಲ ದಾಖಲೆಗಳ ಬಗ್ಗೆ ವರದಿಯಲ್ಲಿ ಸ್ಪಷ್ಟನೆ ನೀಡಬೇಕು ಎಂದು ಹೈಕೋರ್ಟ್ ಸೂಚಿಸಿದೆ.

1992–93ರ ಅವಧಿಯಲ್ಲಿ ಮಂಜೂರು ಮಾಡಿದ ಸುಮಾರು 400 ಪೆಟ್ರೋಲ್ ಬಂಕ್‌ಗಳು ಮತ್ತು ಅಡುಗೆ ಅನಿಲ ವಿತರಣಾ ಪರವಾನಗಿಗಳ ಕ್ರಮಬದ್ಧತೆಯನ್ನು
ಪರಿಶೀಲಿಸುತ್ತಿರುವ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ಮಹಿಳಾ ಮೀಸಲು ಮಸೂದೆಗೆ ಮುಸ್ಲಿಂ ಸದಸ್ಯರ ವಿರೋಧ

ನವದೆಹಲಿ, ಮೇ 15 (ಯುಎನ್ಐ)– ಮುಸ್ಲಿಂ ಸದಸ್ಯರ ತೀವ್ರ ವಿರೋಧದ ನಡುವೆ ಮಹಿಳಾ ಮೀಸಲಾತಿ ಮಸೂದೆ ನಾಳೆ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಪ್ರತಿಭಟನೆಯ ನಡುವೆಯೂ ಆತುರವಾಗಿ ಈ ಮಸೂದೆಯನ್ನು ಅಂಗೀಕರಿಸಿದರೆ ದೇಶದಾದ್ಯಂತ ತೀವ್ರ ಚಳವಳಿ ನಡೆಸುವು ದಾಗಿ ಕಲ್ಬುರ್ಗಿ ಸಂಸತ್ ಸದಸ್ಯ ಖಮರುಲ್ ಇಸ್ಲಾಂ ಸೇರಿದಂತೆ ಹಲವಾರು ಮಂದಿ ಮುಸ್ಲಿಂ ನಾಯಕರು ಬೆದರಿಕೆ ಹಾಕಿದ್ದಾರೆ.

ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನೀಡುವ ಉದ್ದೇಶದ ಈ ಪರಿಷ್ಕೃತ ಮಸೂದೆಗೆ ಎಲ್ಲ ಪಕ್ಷಗಳ ಮುಸ್ಲಿಂ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ‘ಇದರಿಂದ ಅಲ್ಪಸಂಖ್ಯಾತರಿಗೆ ಮತ್ತು ಹಿಂದುಳಿದ ವರ್ಗಗಳ ಜನತೆಗೆ ಶಾಸನಸಭೆಗಳಲ್ಲಿ ಪ್ರಾತಿನಿಧ್ಯ ದೊರಕುವುದು ತಪ್ಪಿಹೋಗುತ್ತದೆ’ ಎಂದು ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT