ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಬುಧವಾರ, ಜೂನ್ 11, 1997

Last Updated 10 ಜೂನ್ 2022, 19:31 IST
ಅಕ್ಷರ ಗಾತ್ರ

ದಳ ಅಧ್ಯಕ್ಷತೆ: ಒಮ್ಮತದ ಆಯ್ಕೆಗೆ ತೆರೆಮರೆ ಯತ್ನ
ನವದೆಹಲಿ, ಜೂನ್ 10–
ವಿವಾದದ ಸುಳಿಗೆ ಸಿಕ್ಕಿ ನ್ಯಾಯಾಲಯದ ವಶವಾಗಿರುವ ಜನತಾದಳದ ಅಧ್ಯಕ್ಷ ಸ್ಥಾನದ ಚುನಾವಣೆ ಯನ್ನು ಈಗಲೂ ಒಮ್ಮತದ ಅಭ್ಯರ್ಥಿಯ ಆಯ್ಕೆಗೆ ತೆರೆಮರೆಯ ಪ್ರಯತ್ನ ನಡೆಯುತ್ತಿದೆ.

ಈ ಪ್ರಯತ್ನಕ್ಕೆ ಈಗ ಕೈಹಾಕಿರುವವರು ಕರ್ನಾಟಕದ ಎಂ.ಎಸ್.ಗುರುಪಾದ ಸ್ವಾಮಿ ಅವರು. ಈಗಾಗಲೇ ಅನೇಕ ಹಿರಿಯರನ್ನು ಭೇಟಿ ಮಾಡಿರುವ ಅವರು, ಲಾಲೂ ಪ್ರಸಾದ್ ಯಾದವ್ ಮತ್ತು ಶರದ್ ಯಾದವ್ ಅವರಿಬ್ಬರನ್ನೂ ಕಣದಿಂದ ನಿವೃತ್ತಗೊಳಿಸಿ ಮೂರನೇ ಅಭ್ಯರ್ಥಿಯ ಆಯ್ಕೆಗೆ ಒಲವು ಮೂಡಿಸುವ ಕ್ರಿಯೆಯಲ್ಲಿ ತೊಡಗಿದ್ದಾರೆ.

ಈ ಮೂರನೇ ಅಭ್ಯರ್ಥಿ ಪ್ರೊ. ಮಧು ದಂಡವತೆ ಅವರಾಗಲಿ ಎಂಬುದು ಗುರುಪಾದ ಸ್ವಾಮಿ ಅವರ ಲಾಬಿ. ಪ್ರಧಾನಿ ಗುಜ್ರಾಲ್ ಅವರೇ ಅಧ್ಯಕ್ಷರಾಗಲಿ ಎನ್ನುವ ವಾದವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT