ಸೋಮವಾರ, ಸೆಪ್ಟೆಂಬರ್ 27, 2021
21 °C

25 ವರ್ಷಗಳ ಹಿಂದೆ: ಶನಿವಾರ 17.8.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಬಿಐ ಮುಖ್ಯಸ್ಥ ಸಿಂಗ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ

ನವದೆಹಲಿ, ಆ. 16 (ಪಿಟಿಐ)– ಹವಾಲ ಹಗರಣದ ಆರೋಪಿಗಳಾದ ಕೆಲವು ಪ್ರಮುಖ ರಾಜಕಾರಣಿಗಳನ್ನು ಭೇಟಿ ಮಾಡಿದ್ದ ಸಿಬಿಐ ನಿರ್ದೇಶಕ ಜೋಗಿಂದರ್ ಸಿಂಗ್‌ ಅವರಿಗೆ ಸುಪ್ರೀಂ ಕೋರ್ಟಿನ ನ್ಯಾಯಪೀಠವು ಇಂದು ತುಂಬಿದ ನ್ಯಾಯಾಲಯದಲ್ಲಿ ಛೀಮಾರಿ ಹಾಕಿತು.

ಸಿಬಿಐ ನೂತನ ಮುಖ್ಯಸ್ಥರ ಕಾರ್ಯ ವೈಖರಿ ಹಾಗೂ ಹವಾಲ ಹಗರಣದ ತನಿಖೆ ಬಗ್ಗೆ ನ್ಯಾಯಮೂರ್ತಿಗಳಾದ ಜೆ.ಎಸ್.ವರ್ಮಾ, ಎಸ್‌.ಪಿ.ಭರೂಚ ಮತ್ತು ಎಸ್‌.ಸಿ.ಸೆನ್ ಅವರಿದ್ದ ಮೂವರು ನ್ಯಾಯಮೂರ್ತಿಗಳ ಪೀಠವು ತರಾಟೆಗೆ ತೆಗೆದುಕೊಂಡ ತಕ್ಷಣವೇ ಜೋಗಿಂದರ್ ಸಿಂಗ್ ಅವರು ಕ್ಷಮೆ ಯಾಚಿಸಿದರು.

‘ಈ ಕ್ಷಣದಿಂದಲೇ ನಾನು ಎಲ್ಲರ ಒಡನಾಟ ತೊರೆಯುವೆ. ಮುಂದೆ ಎಂದೂ ಇಂಥ ತಪ್ಪುಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು