ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶನಿವಾರ, 6–1–1973

Last Updated 5 ಜನವರಿ 2023, 19:45 IST
ಅಕ್ಷರ ಗಾತ್ರ

‘ಆಂಧ್ರದ ವಿಭಜನೆ ಪರಿಹಾರವಲ್ಲ; ಹೊಸ ಸಮಸ್ಯೆಗಳಿಗೆ ಮೂಲ’

ಬೆಂಗಳೂರು, ಜನವರಿ 5– ಆಂಧ್ರ ವಿಭಜನೆಯಿಂದ ಸಮಸ್ಯೆ ಅಂತ್ಯಗೊಳ್ಳದೆ ‘ಅನೇಕ ಹೊಸ ಸಮಸ್ಯೆಗಳಿಗೆ ಮೂಲವಾಗುತ್ತದೆ’ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

‘ಈ ಕ್ರಮದಿಂದ ಬೇರೆ ರಾಜ್ಯಗಳ ಮೇಲೆ ಪರಿಣಾಮ ಆಗಬಹುದು. ಆದರೆ ಅಲ್ಲಿರುವ ಜನರಿಗೇ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು’ ಎಂದು ತಿಳಿಸಿದರು.

ವರ್ಗರಹಿತ, ಜಾತಿರಹಿತ ಸಮಾಜ ನಿರ್ಮಾಣವೇ ಗುರಿ: ಇಂದಿರಾ ಗಾಂಧಿ

ಬೆಂಗಳೂರು, ಜನವರಿ 5– ‘ದೇಶದ ಮೂರರಲ್ಲಿ ಎರಡು ಭಾಗ ಪ್ರದೇಶದಲ್ಲಿ ಅಭಾವ ಪರಿಸ್ಥಿತಿ ಇರುವುದರ ದುರ್ಲಾಭ ಪಡೆದು ಜಾತಿ ಮತ್ತು ಹಿಂಸಾಚಾರದ ಹೆಸರಿನಲ್ಲಿ ಕೆಲವು ಶಕ್ತಿಗಳು ಜನತೆಯನ್ನು ಆರ್ಥಿಕ ಹಾಗೂ ಸಾಮಾಜಿಕ ಸಮತೆ ದಾರಿಯಿಂದ ವಿಮುಖಗೊಳಿಸುವ ಕಾರ್ಯದಲ್ಲಿ ತೊಡಗುತ್ತಿವೆ’ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.

‘ದೇಶದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಪರಿವರ್ತನೆಯ ಕ್ರಾಂತಿ ವಿಳಂಬವಾಗುತ್ತಿದೆಯಾದರೆ, ಅದಕ್ಕೆ ಸಮಾಜವಾದೀ ಕ್ರಮಗಳಿಂದಾಗಿ ಸ್ವಹಿತಕ್ಕೆ ಬಾಧೆಪಟ್ಟಿರುವ ಈ ಶಕ್ತಿಗಳ ಪ್ರಭಾವವೇ ಕಾರಣ’ ಎಂದು ಹೇಳಿದ ಪ್ರಧಾನಿಯವರು, ‘ಪ್ರಗತಿಶೀಲ ಮಾರ್ಗ ನಂಬಿರುವ ಜನರು ಒಗ್ಗಟ್ಟಾಗದೇ ಹೋದರೆ, ಈ ಶಕ್ತಿಗಳಿಂದ ತೊಂದರೆ ತಪ್ಪಿದ್ದಲ್ಲ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT