ಶನಿವಾರ, ಏಪ್ರಿಲ್ 1, 2023
32 °C

50 ವರ್ಷಗಳ ಹಿಂದೆ: ಬುಧವಾರ, 17 ಜನವರಿ 1973

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಆಂಧ್ರ ಮುಖ್ಯಮಂತ್ರಿಗೆ ದೆಹಲಿ ತುರ್ತು ಕರೆ; ರಾಷ್ಟ್ರಪತಿ ಆಳ್ವಿಕೆ ಖಚಿತ 
ನವದೆಹಲಿ, ಜ. 16–
ತೀವ್ರ ತೊಂದರೆಗೆ ಗುರಿಯಾಗಿರುವ ಆಂಧ್ರಪ್ರದೇಶವನ್ನು ಸ್ವಲ್ಪಕಾಲದವರೆಗಾದರೂ ರಾಷ್ಟ್ರಪತಿ ಆಡಳಿತಕ್ಕೆ ಒಳಪಡಿಸಬೇಕೆಂಬ ನಿರ್ಧಾರವನ್ನು ಇಂದು ಬೆಳಿಗ್ಗೆ ಇಲ್ಲಿ ಸಂಪುಟದ ರಾಜಕೀಯ ವ್ಯವಹಾರ ಸಮಿತಿ ಸಭೆಯಲ್ಲಿ ಎರಡು ಗಂಟೆಗಳ ದೀರ್ಘ ಚರ್ಚೆ ನಂತರ ಕೈಗೊಳ್ಳಲಾಯಿತೆಂದು ತಿಳಿದುಬಂದಿದೆ.

ಈ ಬಗೆಗೆ ರಾಷ್ಟ್ರಪತಿ ವಿ.ವಿ. ಗಿರಿ ಅವರಿಗೆ ಶಿಫಾರಸು ಮಾಡುವುದಕ್ಕೆ ಮುಂಚೆ ತುರ್ತು ಸಮಾಲೋಚನೆಗಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪಿ.ವಿ. ನರಸಿಂಹ ರಾವ್‌ ಅವರು ದೆಹಲಿಗೆ ಧಾವಿಸಿದರು. ಅವರು ಉಮಾಶಂಕರ್‌ ದೀಕ್ಷಿತ್‌ ಅವರನ್ನು ಮೊದಲು ಭೇಟಿಯಾಗಿದ್ದರು.

ನಿರ್ಧಾರಕ್ಕೂ ಮುಂಚಿನ ಸಮಾಲೋಚನೆಯಲ್ಲಿ ಹಾಜರಿರುವುದಕ್ಕಾಗಿ ಇಂದು ರಾತ್ರಿ ಭೋಪಾಲ್‌ ಪ್ರವಾಸವನ್ನು ಕಾಂಗ್ರೆಸ್‌ ಅಧ್ಯಕ್ಷ ಡಾ. ಶಂಕರ ದಯಾಳ್‌ ಶರ್ಮ ಅವರು ರದ್ದು ಪಡಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು