ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ ಶನಿವಾರ 29.7.1972

Last Updated 28 ಜುಲೈ 2022, 19:30 IST
ಅಕ್ಷರ ಗಾತ್ರ

ಸಿಮ್ಲಾ ಒಪ್ಪಂದಕ್ಕೆ ಭಾರತದ ಅನುಮೋದನೆ ರಾಷ್ಟ್ರಪತಿ ಸಹಿ

ನವದೆಹಲಿ, ಜುಲೈ 28– ಪಡೆಗಳ ವಾಪಸಾತಿ ಹಾಗೂ ಪರಸ್ಪರ ಸಂಧಾನದ ಮೂಲಕ ಎರಡು ರಾಷ್ಟ್ರಗಳ ನಡುವಣ ವಿವಾದಗಳ ಇತ್ಯರ್ಥಕ್ಕೆ ಕರೆ ನೀಡಿರುವ ಸಿಮ್ಲಾ ಒಪ್ಪಂದಕ್ಕೆ ಭಾರತ ಇಂದು ಅನುಮೋದನೆ ನೀಡಿತು.

ರಾಷ್ಟ್ರಪತಿ ವಿ.ವಿ. ಗಿರಿಯವರು ಇಂದು ಸಿಮ್ಲಾ ಒಪ್ಪಂದದ ಅನುಮೋದನೆ ಪತ್ರಕ್ಕೆ ಸಹಿ ಹಾಕಿದರು. ಪಾಕಿಸ್ತಾನ ಈ ತಿಂಗಳ 15ರಂದು ಸಿಮ್ಲಾ ಒಪ್ಪಂದಕ್ಕೆ ಅನುಮೋದನೆ ನೀಡಿತು.

ಸಹಿ ಹಾಕಿದ ಅನುಮೋದನೆ ಪತ್ರ ಗಳನ್ನು ಭಾರತ– ಪಾಕಿಸ್ತಾನ ವಿನಿಮಯ ಮಾಡಿ ಕೊಂಡ ನಂತರ ಸಿಮ್ಲಾ ಒಪ್ಪಂದ ಜಾರಿಗೆ ಬರುತ್ತದೆ.

ಒಂದು ನಕಲಿ ಮಾರ್ಕ್ಸ್‌ ಕಾರ್ಡ್‌ಬೆಲೆ 800 ರೂ.!

ಬೆಂಗಳೂರು, ಜುಲೈ 28– ಒಂದು ನಕಲಿ ಮಾರ್ಕ್ಸ್ ಕಾಡಿನ ಬೆಲೆ 800 ರೂಪಾಯಿ– ಇದು ಮೈಸೂರು ವಿಶ್ವವಿದ್ಯಾನಿಲಯದ ಹೆಸರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ಚಲಾವಣೆಗೆ ತಂದ ತಂಡದ ವ್ಯವಹಾರ.

ಈ ತಂಡಕ್ಕೆ ಸೇರಿದವರೆಂದು ಹೇಳಲಾಗದ ತುಮಕೂರಿನ ಪ್ರಥಮ ದರ್ಜೆ ಕಾಲೇಜಿನ ಗುಮಾಸ್ತರೊಬ್ಬರನ್ನು ಸಿಐಡಿ ಪೊಲೀಸರು ಇಂದು ಬಂಧಿಸಿದ್ದಾರೆ.

ನಕಲಿ ಮಾರ್ಕ್ಸ್‌ ಕಾರ್ಡ್ ಪಡೆದು ಕಾಲೇಜಿನಲ್ಲಿ ಪ್ರವೇಶ ಪಡೆದು ಕಣ್ಮರೆ ಆಗಿದ್ದಾಳೆಂದು ಹೇಳಲಾದ ವಿದ್ಯಾರ್ಥಿನಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT