ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುರುವಾರ 31 ಮೇ, 1973

Published 30 ಮೇ 2023, 22:30 IST
Last Updated 30 ಮೇ 2023, 22:30 IST
ಅಕ್ಷರ ಗಾತ್ರ

ಕೃಷಿ ವಿಶ್ವವಿದ್ಯಾನಿಲಯದಲ್ಲಿ ಅಧಿಕಾರ ಮೀರಿ ಹಸ್ತಕ್ಷೇಪ: ಸಚಿವರ ವಿರುದ್ಧ ಆಪಾದನೆ

ಬೆಂಗಳೂರು, ಮೇ 30– ಕೃಷಿ ಸಚಿವ ಶ್ರೀ ಕೆ.ಎಚ್‌.ಪಾಟೀಲ್ ಅವರು ಹೆಬ್ಬಾಳಿನ ಕೃಷಿ ವಿಶ್ವವಿದ್ಯಾನಿಲಯದ ವ್ಯವಹಾರದಲ್ಲಿ ತಮಗಿರುವ ಅಧಿಕಾರವನ್ನು ಮೀರಿ ಹಸ್ತಕ್ಷೇಪ ನಡೆಸಿದ್ದಾರೆಂದು ವಿಧಾನಪರಿಷತ್ತಿನಲ್ಲಿ ಇಂದು ಪಕ್ಷೇತರ ಸದಸ್ಯ ಶ್ರೀ ಎಂ.ಸತ್ಯನಾರಾಯಣರಾವ್‌ ಅವರು ಆಪಾದಿಸಿದರು.

ಮೈಸೂರು ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳ ವಿಧೇಯಕದ ಪರಿಶೀಲನೆಗೆ ಸಂಯುಕ್ತ ಪರಿಶೀಲಕ ಸಮಿತಿ ರಚಿಸುವುದಕ್ಕೆ ಒಪ್ಪಿಗೆ ಸೂಚಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಗಿನಿ ಯೋಜನೆ ಪುನರ್ವಿಮರ್ಶೆ

ಬೆಂಗಳೂರು, ಮೇ 30– ಸಿಮೆಂಟ್‌ ಕಾರ್ಖಾನೆ ಮತ್ತು ವಾಡಿ ರೈಲು ಮಾರ್ಗ ಮುಳುಗಡೆ ಆಗುವುದನ್ನು ತಪ್ಪಿಸಲು ಸೇಡಂ ತಾಲ್ಲೂಜಿನ ಕಾಗಿನಿ ಮದಿ ಯೋಜನೆಯನ್ನು 12 ಟಿ.ಎಂ.ಸಿ.ಎಫ್‌.ಟಿ. ನೀರು ಶೇಖರಿಸುವ ಗಾತ್ರದಿಂದ ಮೂರು ಟಿ.ಎಂ.ಸಿ.ಎಫ್‌.ಟಿ. ಜಲಾಶಯ ನಿರ್ಮಾಣಕ್ಕೆ ಪರಿಷ್ಕರಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಶ್ರೀ ಎಚ್‌.ಎಂ.ಚನ್ನಬಸಪ್ಪ ಅವರು ಮಂಗಳವಾರ ವಿಧಾನಸಭೆಯಲ್ಲಿ ಹೇಳಿದರು.

ಶ್ರೀ ಜೆ.ಪಿ.ಸರ್ವೇಶ್‌ (ಕಾಂ–ಸೇಡಂ) ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಹಿಂದೆ ಅದರಿಂದ ನೀರಾವರಿ ಆಗಲು ಉದ್ದೇಶಿಸಿದ್ದ ಜಮೀನು 60 ರಿಂದ 70 ಸಾವಿರ ಎಕರೆ. ಈಗ ಅದು ಸುಮಾರು 25 ಸಾವಿರ ಎಕರೆಗೆ ಇಳಿದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT