ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷದ ಹಿಂದೆ | ಭಾನುವಾರ, 3 ಜೂನ್ 1973

Published 2 ಜೂನ್ 2023, 19:31 IST
Last Updated 2 ಜೂನ್ 2023, 19:31 IST
ಅಕ್ಷರ ಗಾತ್ರ

ಅರಸು ನಾಯಕತ್ವದಲ್ಲಿ ಸಂಸತ್ಸದಸ್ಯರ ಸಭೆಯ ಪೂರ್ಣ ನಂಬಿಕೆ

ಬೆಂಗಳೂರು, ಜೂನ್‌ 2– ಇಂದು ಇಲ್ಲಿ ನಡೆದ ರಾಜ್ಯದ ಸಂಸತ್ತಿನ ಸದಸ್ಯರ ಸಭೆ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ನಾಯಕತ್ವದಲ್ಲಿ ಪೂರ್ಣ ನಂಬಿಕೆಯನ್ನು ವ್ಯಕ್ತಪಡಿಸಿ, ಎಲ್ಲ ವಿಷಯಗಳಲ್ಲೂ ಸಹಕಾರದ ಭರವಸೆಯನ್ನು ನೀಡಿತು.

ಅಲ್ಲದೆ ಇನ್ನು ಮುಂದೆ ರಾಜ್ಯದ ಆಡಳಿತ ಹಾಗೂ ನೀತಿ ಕುರಿತು ಚರ್ಚಿಸ ಬಯಸಿದಲ್ಲಿ ಸಂಸತ್ ಸದಸ್ಯರ ಸಭೆಯ ವೇದಿಕೆಯನ್ನು ಉಪಯೋಗಿಸಿಕೊಳ್ಳದೆ ಮೊದಲು ಮುಖ್ಯಮಂತ್ರಿ ಹಾಗೂ ಪ್ರದೇಶ ಅಧ್ಯಕ್ಷರೊಡನೆ ಚರ್ಚಿಸಲೂ ಈ ಸಭೆ ನಿರ್ಧರಿಸಿತು.

ಸಂಸತ್‌ ಸದಸ್ಯರ ಇವೆರಡು ನಿರ್ಧಾರಗಳೂ ರಾಜ್ಯದ ರಾಜಕೀಯದಲ್ಲಿ ಒಂದು ಪ್ರಮುಖವಾದ ಬೆಳವಣಿಗೆ.

ಆಡಳಿತ ಹಾಗೂ ಕಾಂಗ್ರೆಸ್‌ ಸಂಸ್ಥೆ ಕುರಿತು ತೆರೆದ ಮನಸ್ಸಿನಿಂದ ಚರ್ಚೆ ಮುಂದುವರಿದ ಈ ಸಭೆಯಲ್ಲಿ 14 ಮಂದಿ ಸಂಸತ್ ಸದಸ್ಯರು ಹಾಜರಿದ್ದರು.

ಕೆ.ಜಿ.ಎಫ್‌. ಪ್ರದೇಶದಲ್ಲಿ ತಾಮ್ರ, ಬೆಳ್ಳಿ, ನಿಕ್ಕಲ್‌ ಬಾರಿ ನಿಕ್ಷೇಪ ಪತ್ತೆ

ಬೆಂಗಳೂರು, ಜೂನ್‌ 2– ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ತಾಮ್ರ ಬೆಳ್ಳಿ ಮತ್ತು ನಿಕ್ಕಲ್‌ ನಿಕ್ಷೇಪ ಕಂಡುಬಂದಿದೆ.

ಬಿ.ಜಿ.ಎಂ.ಯು.ಎಲ್‌.ನ ಅಧ್ಯಕ್ಷ ಪ್ರೊ. ಸುಬ್ರಹ್ಮಣ್ಯಂ ಅವರು ಅದನ್ನು ಇಂದು ಇಲ್ಲಿ ಸ್ಥಿರಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT