ಅತ್ಯವಶ್ಯವಾದಷ್ಟನ್ನೇ ಕೊಳ್ಳಲು ರಾಷ್ಟ್ರಪತಿ ಅಹಮದ್ ಕರೆ
ನವದೆಹಲಿ, ಸೆ. 8 – ಜನರು ತಮ್ಮ ಜೀವನದಲ್ಲಿ ಶಿಸ್ತು ತಂದುಕೊಂಡು ಬೆಲೆ ಏರಿಕೆ ಮತ್ತು ಅವಶ್ಯ ವಸ್ತುಗಳ ಅಭಾವ ಎದುರಿಸಲು ತೀರಾ ಅಗತ್ಯವಾದ ವಸ್ತುಗಳಷ್ಟನ್ನೇ ಕೊಳ್ಳಬೇಕೆಂದು ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ಇಂದು ಹೇಳಿದರು.
ಭಗವಾನ್ ಮಹಾವೀರರ 25ನೇ ನಿರ್ವಾಣ ಶತಮಾನೋತ್ಸವ ಸಂದರ್ಭದಲ್ಲಿ ಅವರು ಮಾತನಾಡಿ, ಜನರು ತಮ್ಮ ಸ್ವಂತ ಆಕಾಂಕ್ಷೆಗಳಿಗಷ್ಟೇ ಗಮನ ಕೊಡುತ್ತಿರುವುದಕ್ಕಾಗಿ ವಿಷಾದ ವ್ಯಕ್ತಪಡಿಸಿದರು.