ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷದ ಹಿಂದೆ | ಭಾರತಕ್ಕೆ 56 ಕೋಟಿ ಬ್ರಿಟಿಷ್‌ ಸಾಲ

ಶುಕ್ರವಾರ – ಸೆಪ್ಟೆಂಬರ್ 13, 1974
Published : 12 ಸೆಪ್ಟೆಂಬರ್ 2024, 19:30 IST
Last Updated : 12 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments

ನಗರದಲ್ಲಿ ಆಸ್ತಿ ಗಣತಿ; ಮೌಲ್ಯ ಕಡಿಮೆ ತೋರಿದ ಪ್ರಕರಣಗಳ ಪತ್ತೆ ಕ್ರಮ

ಬೆಂಗಳೂರು, ಸೆ. 12– ಉದ್ದೇಶಪೂರ್ವಕವಾಗಿ ಆಸ್ತಿಯ ಬೆಲೆಯನ್ನು ಕಡಿಮೆ ಅಂದಾಜು ಮಾಡಿ ತೆರಿಗೆ ತಪ್ಪಿಸಿಕೊಳ್ಳುವುದನ್ನು ಪತ್ತೆ ಹಚ್ಚಲು ರಾಷ್ಟ್ರದ ಮುಖ್ಯ ನಗರಗಳಲ್ಲಿ ಆಸ್ತಿ ಗಣತಿ ಕೈಗೊಳ್ಳಲಾಗಿದೆ. ಅದು ಬೆಂಗಳೂರು ನಗರದಲ್ಲಿ ಆರಂಭವಾಗಿದೆ.

ಈ ವಿಷಯವನ್ನು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಕೇಂದ್ರದ ಅರ್ಥ ಶಾಖೆ ರಾಜ್ಯ ಸಚಿವ ಶ್ರೀ ಕೆ.ಆರ್‌. ಗಣೇಶ್‌ರವರು, ತೆರಿಗೆ ಕೊಡದೆ ಉಳಿಸಿಕೊಳ್ಳಲಾದ ಹಣವನ್ನು ಆಸ್ತಿಯ ಮೇಲೆ ವಿನಿಯೋಗಿಸಲಾಗಿದೆಯೆಂಬ ಸಂಶಯ ಉಂಟಾಗಿರುವುದರಿಂದ ಈ ಸೆನ್ಸಸ್‌ ಕೈಗೊಳ್ಳಲಾಗಿದೆಯೆಂದು ತಿಳಿಸಿದರು.

***

ಭಾರತಕ್ಕೆ 56 ಕೋಟಿ ಬ್ರಿಟಿಷ್‌ ಸಾಲ

ನವದೆಹಲಿ, ಸೆ. 12– ಭಾರತಕ್ಕೆ 56.9 ಕೋಟಿ ರೂ. ಬ್ರಿಟಿಷ್‌ ಸಾಲ ನೀಡುವ ಒಪ್ಪಂದಕ್ಕೆ ಇಂದು ದೆಹಲಿಯಲ್ಲಿ ಸಹಿ ಹಾಕಲಾಯಿತು.

ಯೋಜನೇತರ ವಸ್ತುಗಳು– ಅಂದರೆ ಭಾರತದ ತೈಲ ಮತ್ತು ಕೈಗಾರಿಕಾ ಉತ್ಪಾದನೆಗೆ ಅಗತ್ಯವಾದ ಕಚ್ಚಾವಸ್ತುಗಳು, ಬಿಡಿಭಾಗಗಳು ಮತ್ತು ಯಂತ್ರೋಪಕರಣಗಳ ಆಮದಿಗೆ ಈ ಹಣವನ್ನು ಭಾರತ ಬಳಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT